ಕರಾವಳಿಯಲ್ಲಿ ಹೀಟ್‌ವೇವ್ ಜೊತೆಗೆ ಮಳೆ ಮುನ್ಸೂನೆ: ಮಂಗಳೂರು-ಉಡುಪಿಗೆ ಯೆಲ್ಲೋ ಅಲರ್ಟ್‌ ಘೋಷಣೆ

Coastal Karnataka Weather Update

ಮಂಗಳೂರು/ಉಡುಪಿ: ಕರಾವಳಿ ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಬಿಸಿಲು ಮತ್ತು ಮಳೆಯ ಮಿಶ್ರ ಹವಾಮಾನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಷ್ಣಾಂಶ ಹಾಗೂ ಆರ್ದ್ರತೆ ಹೆಚ್ಚಾಗಲಿದ್ದು, ಏಪ್ರಿಲ್ 26ರಿಂದ 29ರವರೆಗೆ ಮಿಂಚು-ಗುಡುಗಿನೊಂದಿಗೆ ಸಾಧಾರಣ ಮಳೆಯ ಸಾಧ್ಯತೆಯಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಮಳೆಯ ಮುನ್ಸೂಚನೆ ಇದ್ದರೂ ಮಧ್ಯಾಹ್ನ ವೇಳೆಯಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ. ಕೆಲವು ಭಾಗಗಳಲ್ಲಿ ಹೀಟ್‌ವೇವ್ ಪರಿಸ್ಥಿತಿ ಉಂಟಾಗುವ ಎಚ್ಚರಿಕೆಯನ್ನೂ ಇಲಾಖೆ ನೀಡಿದೆ. ವಿಶೇಷವಾಗಿ ಮಿಂಚು-ಗುಡುಗು ಸಂದರ್ಭಗಳಲ್ಲಿ ಮೀನುಗಾರರು ಹಾಗೂ ಕರಾವಳಿ ಭಾಗದ ಜನರು ಎಚ್ಚರಿಕೆಯಿಂದಿರಬೇಕು ಎಂದು ಸೂಚಿಸಲಾಗಿದೆ.

Advertisement

ಇದನ್ನೂ ಓದಿ: ಕಾರ್ಕಳ: ಚಿನ್ನಾಭರಣ ಕಳವು ಪ್ರಕರಣ: ಖದೀಮ ಸಹಿತ ಚಿನ್ನ ಖರೀದಿಸಿದವನೂ ಅರೆಸ್ಟ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಹೆಚ್ಚು ಆರ್ದ್ರತೆ ಜೊತೆಗೆ ಮೋಡ-ಬಿಸಿಲಿನ ಮಿಶ್ರ ವಾತಾವರಣ ಕಂಡುಬಂದಿದೆ. ಮಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 34.7°C ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.3°C ಹೆಚ್ಚಾಗಿದೆ. ಕನಿಷ್ಠ ತಾಪಮಾನ 25.3°C ಆಗಿದ್ದು, ಇದು ಸಹ ಸಾಮಾನ್ಯ ಮಟ್ಟಕ್ಕಿಂತ 0.2°C ಹೆಚ್ಚಾಗಿದೆ.

Advertisement

ಮುಂದಿನ ದಿನಗಳಲ್ಲಿ ಬಿಸಿಲು ಮತ್ತು ಅಕಸ್ಮಿಕ ಮಳೆಯ ಸಂಯುಕ್ತ ಪರಿಣಾಮದಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜನರು ಸಾಕಷ್ಟು ನೀರು ಸೇವಿಸಿ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ಸಲಹೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು