ರಾಮೇಶ್ವರಂ: ಭಾರತದ ಜಲಸಾಹಸ ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಜಾರ್ಖಂಡ್‌ನ ರಾಂಚಿ ಮೂಲದ 7 ವರ್ಷದ ಬಾಲಕ ಇಶಾಂಕ್ ಶ್ರೀಲಂಕಾ ಮತ್ತು ಭಾರತದ ನಡುವಿನ ಪಾಲ್ಕ್ ಜಲಸಂಧಿಯನ್ನು (Palk Strait) ಈಜುವ ಮೂಲಕ ಈ ಜಲಸಂಧಿಯಲ್ಲಿ ಈಜಾಡಿದ ಅತಿ ಕಿರಿಯ ವಯಸ್ಸಿನ ಈಜುಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಶ್ರೀಲಂಕಾದ ತಲೈಮನ್ನಾರ್‌ನಿಂದ ಭಾರತದ ಧನುಷ್ಕೋಡಿಯವರೆಗೆ ಸುಮಾರು 29 ಕಿ.ಮೀ ದೂರ. ಈ ದೂರವನ್ನು ಇಶಾಂಕ್ ಕೇವಲ 9 ಗಂಟೆ 50 ನಿಮಿಷಗಳಲ್ಲಿ ಕ್ರಮಿಸಿದ್ದಾನೆ.

ಇದನ್ನೂ ಓದಿ: Viral Video: ಬಣ್ಣ ಎರಚಿದ ಪುಟ್ಟ ಬಾಲಕನ ಮೇಲೆ ಬಿಸಿಬಿಸಿ ನೀರು ಸುರಿದ ಅಜ್ಜಿ! ಬಾಲಕನ ನರಳಾಟ
ವಿಡಿಯೋ ಇಲ್ಲಿದೆ ನೋಡಿ

7-year-old Ishank from Ranchi, India just set a world record by swimming 29km across the Palk Strait (Sri Lanka to India) in just 9 hours and 50 minutes. The youngest ever to conquer this route! (April 30, 2026) pic.twitter.com/OvAm4enO25
— Weather Monitor (@WeatherMonitors) May 1, 2026
ಏಪ್ರಿಲ್ 30, 2026 ರಂದು ಈ ಸಾಹಸ ಮೆರೆಯುವ ಮೂಲಕ, ಈ ಮಾರ್ಗವನ್ನು ಕ್ರಮಿಸಿದ ವಿಶ್ವದ ಅತಿ ಕಿರಿಯ ಈಜುಗಾರ ಎಂಬ ವಿಶ್ವ ದಾಖಲೆ ಬರೆದಿದ್ದಾನೆ. ಸಮುದ್ರದ ಬಲವಾದ ಅಲೆಗಳು ಮತ್ತು ಸವಾಲಿನ ಹವಾಮಾನದ ನಡುವೆಯೂ ಇಶಾಂಕ್ ತೋರಿದ ಈ ಧೈರ್ಯ ಮತ್ತು ಶಕ್ತಿ ಎಲ್ಲರಿಗೂ ಮಾದರಿಯಾಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

