ನವದೆಹಲಿ: ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿಡಲು ಮತ್ತು ವಿದೇಶಿ ವಿನಿಮಯ ಮೀಸಲು (Forex Reserves) ಕುಸಿತವನ್ನು ತಡೆಯಲು ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಆಮದು ಸುಂಕವನ್ನು (Customs Duty) ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದೆ. ಈ ನಿರ್ಧಾರವು ಇಂದಿನಿಂದಲೇ (ಮೇ 13, 2026) ಜಾರಿಗೆ ಬಂದಿದೆ.
ಈ ಹಿಂದೆ ಶೇ. 6 ರಷ್ಟಿದ್ದ ಒಟ್ಟಾರೆ ಆಮದು ಸುಂಕವನ್ನು ಈಗ ಶೇ. 15 ಕ್ಕೆ ಏರಿಕೆ ಮಾಡಲಾಗಿದೆ. ಇದರಲ್ಲಿ ಶೇ. 10 ರಷ್ಟು ಮೂಲ ಆಮದು ಸುಂಕ ಮತ್ತು ಶೇ. 5 ರಷ್ಟು ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ಸೇರಿದೆ.
ಇದನ್ನೂ ಓದಿ: ಚಿನ್ನದ ಉಂಗುರದೊಳಗೆ ಸಿಲುಕಿದ ಹಾವು! ಇದು ಅಚ್ಚರಿಯಾದರೂ ಸತ್ಯ ಮಾರಾಯ್ರೆ
ಇತ್ತೀಚೆಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಜಾಗತಿಕ ಇಂಧನ ಬಿಕ್ಕಟ್ಟು ಮತ್ತು ಯುದ್ಧದಂತಹ ಪರಿಸ್ಥಿತಿಯಲ್ಲಿ ದೇಶದ ಹಿತದೃಷ್ಟಿಯಿಂದ ಕನಿಷ್ಠ ಒಂದು ವರ್ಷದವರೆಗೆ ಚಿನ್ನ ಖರೀದಿಯನ್ನು ಮುಂದೂಡುವಂತೆ ನಾಗರಿಕರಲ್ಲಿ ವಿನಂತಿಸಿದ್ದರು.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದಿಂದಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗುತ್ತಿದೆ. ಭಾರತವು ತನ್ನ ಇಂಧನ ಮತ್ತು ಚಿನ್ನದ ಅಗತ್ಯಕ್ಕಾಗಿ ಆಮದನ್ನೇ ಅವಲಂಬಿಸಿರುವುದರಿಂದ, ವಿದೇಶಿ ವಿನಿಮಯದ ಮೇಲೆ ಒತ್ತಡ ಬೀಳುತ್ತಿದೆ. ಇದನ್ನು ತಪ್ಪಿಸಲು ಆಮದು ಸುಂಕ ಹೆಚ್ಚಿಸಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


