ಮನೆಯಲ್ಲಿ ಚಿನ್ನ ಇಟ್ಟಿದ್ದೀರಾ? ಜಾಗ್ರತೆ! ಯಾಕಂದ್ರೆ ಹಾವು ಕೂಡ ಈಗ ಜ್ಯುವೆಲ್ಲರಿ ಮೇಲೆ ಇಂಟರೆಸ್ಟ್ ತೋರಿಸ್ತಾ ಇದೆ ಕಣ್ರೀ.. ಹೌದು, ಕಾಸರಗೋಡಿನ ಆಡುರ್‌ನ ರವಿ ಅವರ ಮನೆಯಲ್ಲಿ ಮಕ್ಕಳು ಡ್ರಾಯರ್ ತೆರೆದಿದ್ದಾರೆ. ಪಾಪಾ.. ಚಾಕಲೇಟ್ ಸಿಗುತ್ತೆ ಅಂತ ಭಾವಿಸಿ ಡ್ರಾಯರ್ ಎಳೆದರೇನೋ ಗೊತ್ತಿಲ್ಲ, ಆದರೆ ಕಣ್ಣಿಗೆ ಬಿದ್ದದ್ದು ಮಾತ್ರ ಹಾಯಾಗಿ ಮಲಗಿಕೊಂಡಿದ್ದ ಹಾವು.
ಅದೂ ಸಾಮಾನ್ಯ ಹಾವು ಅಲ್ಲ… ದೇಹಕ್ಕೆ ಚಿನ್ನದ ಉಂಗುರ ಹಾಕಿಕೊಂಡು “ಐಯಂ ರೆಡಿ ಫಾರ್ ಫೋಟೋ” ಅಂತ ಸ್ಟೈಲ್ ಹೊಡೆಯುತ್ತಿತ್ತು!
ಥಕ್ಕನೆ ಹಿಂದಕ್ಕೆ ಹಾರಿದ ಮಕ್ಕಳು ಕಿರುಚಾಡಿದ್ದಾರೆ. ಹಿರಿಯರೆಲ್ಲರೂ ಬಂದು ನೋಡಿದಾಗ ಹಾವು ಚಿನ್ನದ ಉಂಗರ ಧರಿಸಿ ಹಾಯಾಗಿ ಮಲಗಿಕೊಂಡಿದೆ. ಅಯ್ಯೋ ದೇವರೇ… ಚಿನ್ನದ ಬೆಲೆ ಗಗನಕ್ಕೇರಿದ ಸಮಯದಲ್ಲಿ ಈ ಹಾವಿಗೆ ಚಿನ್ನದ ಮೇಲೆ ಸಿಕ್ಕಾಪಟ್ಟೆ ಆಸೆಯಾಗಿದೆ ಕಣ್ರೀ.. ಅದಕ್ಕೆ ಚಿನ್ನದ ಉಂಗುರದ ಒಳಗೆ ನುಗ್ಗಿದೆ.
ಇದನ್ನೂ ಓದಿ: ಕ್ಯಾಮೆರಾ ಮುಂದೆ ಹಾವಿನೊಂದಿಗೆ ಸರಸ: ವಿಷಕಾರಿ ಹಾವು ಕಚ್ಚಿ ಕ್ಷಣಾರ್ಧದಲ್ಲಿ ಪ್ರಾಣಬಿಟ್ಟ ವ್ಯಕ್ತಿ
ಚಿನ್ನದ ಉಂಗುರದೊಳಗೆ ತಗಲಾಕೊಂಡ ಹಾವು ತನ್ನ ಮನಸ್ಸಿನಲ್ಲೇ “ನೀವು ಬೆರಳಿಗೆ ರಿಂಗ್ ಹಾಕುತ್ತೀರಿ… ನಾನು ಸ್ವಲ್ಪ ಡಿಫರೆಂಟ್ ಆಗಿ ಬೋಡಿಗೆ ಹಾಕಿಕೊಂಡಿದ್ದೇನೆ, ಆದ್ರೆ ಫ್ಯಾಷನ್ ಸ್ವಲ್ಪ ಓವರ್ ಆಗಿ, ಕೊನೆಗೆ ಡ್ರಾಯರ್ ಒಳಗೆ ಸಿಲುಕೊಂಡು ‘ಮೋಡೆಲ್’ ಬದಲು ಕಳ್ಳನಂತಾದೆ” ಎಂದು ಯೋಚಿಸಿತೇನೋ…
ಆದರೆ, ಪಾಪ… ಡ್ರಾಯರ್ ಒಳಗೆ ಹಾವು ಇರುವುದನ್ನು ನೋಡಿದ ಮಕ್ಕಳು ಕಂ ಬ್ಯಾಕ್ ಆದರು. ಅಷ್ಟರಲ್ಲೇ ಅರಣ್ಯ ಇಲಾಖೆಯವರ ಎಂಟ್ರಿ ಆಯ್ತು. “ಇದು ಫ್ಯಾಷನ್ ಶೋ ಅಲ್ಲ, ರೆಸ್ಕ್ಯೂ ಕೇಸ್” ಅಂತ ಹೇಳಿ, ಉಂಗುರವನ್ನು ಕಟ್ ಮಾಡಿ ತೆಗೆದು ಹಾವನ್ನು ರಕ್ಷಿಸಿದ್ದಾರೆ.
ನಂತರ, “ಅಬ್ಬಾ! ಡ್ರಯರ್ ಒಳಗೆ ಪ್ರವೇಶಿಸಿದ್ದೇ ತಪ್ಪು… ಅದರಲ್ಲೂ ಉಂಗರ ಧರಿಸಲು ಹೋಗಿದ್ದು ದೊಡ್ಡ ತಪ್ಪು, ಸಾಕಪ್ಪಾ ಸಾಕು ಒಮ್ಮೆ ನನ್ನನ್ನು ಕಾಡಿಗೆ ಬಿಟ್ಟು ಪುಣ್ಯ ಕಟ್ಕೊಳ್ರಪ್ಪಾ” ಅಂತ ಹಾವು ಫೀಲ್ ಮಾಡಿರಬಹುದು.
ಕೊನೆಗೆ ಹಾವನ್ನು ಅರಣ್ಯಕ್ಕೆ ಬಿಡಲಾಯಿತು. ಈ ಘಟನೆ ಬಳಿಕ ಆಭರಣಗಳ ರಕ್ಷಣೆಗೆ ಲಾಕರ್ ಬದಲು ಡ್ರಾಯರ್ ಒಳಗೆ ಹಾವನ್ನೇ ಇರಿಸಿದರೆ ಉತ್ತಮ ಎಂದು ನೆಟ್ಟಿಗರು ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ. ಆದರೂ ಅಷ್ಟು ಸಣ್ಣ ಉಂಗುರದೊಳಗೆ ಹಾವು ಹೇಗೆ ನುಗ್ಗಿತು? ಇದು ನಿಜಕ್ಕೂ ಯಕ್ಷ ಪ್ರಶ್ನೆ!
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

