ದೇಶ
Trending: ಆಪರೇಷನ್ ಸಿಂದೂರ ಕಾರ್ಯಾಚರಣೆ ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ
ಕಾಶ್ಮೀರದ ಪಹಲ್ಗಾಮ್ನಲ್ಲಿ ಅಮಾಯಕ ನಾಗರಿಕರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಮೇ ತಿಂಗಳಿನಲ್ಲಿ ಭಾರತೀಯ ಸೇನೆ ಆಪರೇಷನ್ ಸಿಂದೂರ ಹೆಸರಿನಡಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ನಡೆಸಿದ ದಾಳಿಯ ವಿಡಿಯೋವನ್ನು ಭಾರತೀಯ ಸೇನೆ ಹಂಚಿಕೊಂಡಿದೆ.
Read Moreಭಾರತದ ಗಡಿ ಪ್ರವೇಶಿಸಿದ ಪಾಕ್ ಮೀನುಗಾರಿಕಾ ದೋಣಿ ಸೆರೆ : ವಿಡಿಯೋ ಇಲ್ಲಿದೆ
ಅಂತರರಾಷ್ಟ್ರೀಯ ಸಾಗರ ಗಡಿ ರೇಖೆ (IMBL) ಸಮೀಪ ಭಾರತೀಯ ಸಾಗರ ಪ್ರದೇಶದೊಳಗೆ ಒಂದು ಪಾಕಿಸ್ತಾನಿ ಮೀನುಗಾರಿಕಾ ದೋಣಿಯು ಜ.14 ರಂದು ಪತ್ತೆಯಾಗಿದೆ. ಅರಬ್ಬೀ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ, ಭಾರತ ಕರಾವಳಿ ರಕ್ಷಣಾ ಪಡೆಯು ಈ ದೋಣಿಯನ್ನು ಪತ್ತೆಹಚ್ಚಿದೆ.
ಕಾರ್ಯಾಚರಣೆ ವೇಳೆ ಪಾಕಿಸ್ತಾನದ ದೋಣಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕರಾವಳಿ ರಕ್ಷಣಾ ಪಡೆ ದೋಣಿಯನ್ನು ಸುತ್ತುವರಿದು ಸೆರೆ ಹಿಡಿಯುವಲ್ಲಿ ಯಶ್ವಿಯಾಗಿದೆ. ಅಲ್–ಮದೀನಾ (AL-MADINA) ಎಂಬ ಹೆಸರಿನ ಆ ಪಾಕಿಸ್ತಾನಿ ದೋಣಿಯಲ್ಲಿ ಒಟ್ಟು 09 ಸಿಬ್ಬಂದಿ ಇದ್ದರು ಎಂದು ವರದಿಯಾಗಿದೆ.
Read MoreTrain Ticket: 300 ರೈಲುಗಳಲ್ಲಿ OTP ಆಧಾರಿತ ಟಿಕೆಟ್ ವ್ಯವಸ್ಥೆ
ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಮತ್ತು ದಲ್ಲಾಳಿಗಳ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಭಾರತೀಯ ರೈಲ್ವೆಯು 300 ಪ್ರಮುಖ ರೈಲುಗಳಲ್ಲಿ OTP (ಒನ್ ಟೈಮ್ ಪಾಸ್ವರ್ಡ್) ಆಧಾರಿತ ಟಿಕೆಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
Read MoreIran : ಸರ್ಕಾರ ವಿರೋಧಿ ಪ್ರತಿಭಟನೆ : ಇರಾನ್ ಅಶಾಂತಿ ನಡುವೆ ಜೈಶಂಕರ್ಗೆ ಅರಾಘ್ಚಿ ಕರೆ
ಮಧ್ಯಪ್ರಾಚ್ಯ ಮತ್ತೊಮ್ಮೆ ಉದ್ವಿಗ್ನತೆಯ ಕೇಂದ್ರಬಿಂದುವಾಗುತ್ತಿದೆ. ಇರಾನ್ನಲ್ಲಿ ವ್ಯಾಪಕವಾಗಿ ಹರಡಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು, ಅಮೆರಿಕದ ಸೇನಾ ಹಸ್ತಕ್ಷೇಪದ ಬೆದರಿಕೆ ಮತ್ತು ಇಂಟರ್ನೆಟ್ ನಿರ್ಬಂಧಗಳ ನಡುವೆಯೇ, ಇರಾನ್ನ ವಿದೇಶಾಂಗ ಸಚಿವ ಸೈಯ್ಯದ್ ಅಬ್ಬಾಸ್ ಅರಾಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ದೂರವಾಣಿ ಕರೆ ಮಾಡಿ ಪ್ರಾದೇಶಿಕ ಸ್ಥಿತಿಗತಿಯ ಕುರಿತು ಚರ್ಚೆ ನಡೆಸಿದ್ದಾರೆ.
Read MoreJaipur : ಮೋದಿ ಜಾತಿ ಆಧಾರಿತ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧದ ಅರ್ಜಿ ವಜಾ
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಜಾತಿ ಆಧಾರಿತ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದರೂ ಆಗಿರುವ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾದ ಪರಿಷ್ಕರಣಾ ಅರ್ಜಿಯನ್ನು ಜೈಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
Read Moreಜ.23| ರಾಹುಲ್ ಗಾಂಧಿ ಸದಸ್ಯರಾಗಿರುವ ಸಂಸದೀಯ ಸಮಿತಿ ಅಯೋಧ್ಯೆ ಭೇಟಿ
ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರಾಗಿದ್ದು, ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಭೇಟಿ ನೀಡುತ್ತಾರಾ ಎಂಬ ಕುತೂಹಲ ಕೆರಳಸಿದೆ.
Read MoreNew Delhi: ವಿಫಲಗೊಂಡ ಇಸ್ರೋದ PSLV-C62 ಮಿಷನ್
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯ PSLV-C62 ಮಿಷನ್ನ ವೈಫಲ್ಯಗೊಂಡಿದೆ. 16 ಉಪಗ್ರಹಗಳನ್ನು ಹೊತ್ತು ಹೊರಟಿದ್ದ ರಾಕೆಟ್ ನಲ್ಲಿ ಸ್ಪ್ಯಾನಿಷ್ ಸ್ಟಾರ್ಟ್ಅಪ್ ಆರ್ಬಿಟಲ್ ಪ್ಯಾರಡೈಮ್ನ ಕಿಡ್ ಮಾತ್ರ ಬದುಕುಳಿದಿದೆ.
Read MoreRepublic Day : ಗಣರಾಜ್ಯೋತ್ಸವ ಪ್ರಯುಕ್ತ ಈ ಮೊಬೈಲ್ ಗಳ ಮೇಲೆ ವಿಶೇಷ ರಿಯಾಯಿತಿ
ಅಮೆರಿಕದ ಇ-ಕಾಮರ್ಸ್ Amazon ತನ್ನ Great Republic Day Sale 2026-ನ್ನು ಭಾರತದಲ್ಲಿ ಈ ಜನವರಿ 16ರಿಂದ ಆರಂಭಿಸುತ್ತಿರುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಜೊತೆಗೆ ಈ ಸಂದರ್ಭದಲ್ಲಿ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳೊಂದಿಗೆ ಸಹ ಐಫೋನ್ ಗಳ ಮೇಲೆ ವಿಶೇಷ ರಿಯಾಯಿತಿಗಳು ಲಭ್ಯವಾಗಲಿವೆ ಎಂದು ತಿಳಿಸಿವೆ.
Read Moreಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆಗೆ ಮುಖ್ಯಮಂತ್ರಿಯವರಿಂದ ಸನ್ಮಾನ
ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಲ. ರೂ. ಮೌಲ್ಯದ ಆಭರಣವನ್ನು ವಾರೀಸುದಾರರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ ಮಹಿಳೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ ಮುಖ್ಯಮಂತ್ರಿಗಳು
Read Moreಜ.20 ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ
ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ನಿತಿನ್ ನಬಿನ್ ಜನವರಿ 20ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನಬಿನ್ ಬಿಹಾರದ ಪಾಟ್ನಾ ಜಿಲ್ಲೆಯ ಬಂಕಿಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಲಿದ್ದಾರೆ.
Read More
