ವೈರಲ್ & ಟ್ರೆಂಡಿಂಗ್
Widow Pension : ಪಿಂಚಣಿಗಾಗಿ ವಿಧವೆಯಂತೆ ನಟಿಸಿ ಪೊಲೀಸರ ಅತಿಥಿಯಾದ ಮಹಿಳೆ
ಬೆಹ್ಲಾಯಿ : ಮೃತ ರೈಲ್ವೆ ನಿವೃತ್ತ ನೌಕರನ ಪತ್ನಿಯೆಂದು ನಟನೆ ಮಾಡಿ, ಆಕೆಯೂ ಮೃತಪಟ್ಟ ಬಳಿಕವೂ ಹಲವು ವರ್ಷಗಳ ಕಾಲ ಅಕ್ರಮವಾಗಿ ರೈಲ್ವೆ ಪಿಂಚಣಿ ಪಡೆದುಕೊಂಡ ಆರೋಪದ ಮೇಲೆ ಮಹಿಳೆಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಹ್ಲಾಯಿ ಗ್ರಾಮದ ಧರ್ಮೇಂದ್ರ ಯಾದವ್ ನೀಡಿದ ದೂರಿನ ಆಧಾರದ ಮೇಲೆ, ರಸ್ರಾ ಪೊಲೀಸ್ ಠಾಣೆಯಲ್ಲಿ ಪಾರ್ವತಿ ದೇವಿ, ಮೃತ ಮಾಲ್ಧಾನಿಯ ಸಂಬಂಧಿಕರು ಹಾಗೂ ರಸ್ರಾ ಅಭಿವೃದ್ಧಿ ಬ್ಲಾಕ್ನ ಕೆಲವು ಅಜ್ಞಾತ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
Read MoreBreaking: ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಉದ್ಯಮಿ
ಬೆಂಗಳೂರು: ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಚೇರ್ಮನ್ ಸಿ.ಜೆ.ರಾಯ್ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ನಗರದ ಹೊಸೂರು ರಸ್ತೆಯ ಲ್ಯಾಂಗ್ಫೋರ್ಡ್ ಟೌನ್ನಲ್ಲಿರುವ ಕಚೇರಿಯಲ್ಲಿ ನಡೆದಿದೆ. ಸ್ಥಳಕ್ಕೆ ಅಶೋಕ್ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆನೇಕಲ್ನ ನಾರಾಯಣ ಆಸ್ಪತ್ರೆಗೆ ಸಿಜೆ ರಾಯ್ ಶವ ರವಾನಿಸಲಾಗಿದೆ. ಸಿ.ಜೆ.ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನು ಹುಟ್ಟುಹಾಕಿದ್ದರು. ಪದೇ ಪದೆ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ
Read MoreShocking: ಚರಂಡಿ ನೀರಿನಲ್ಲಿ ತಟ್ಟೆ ತೊಳೆಯುತ್ತಿರುವ ಮಕ್ಕಳು!
ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಅಲಬಾಳ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ತಟ್ಟೆಗಳನ್ನು ಚರಂಡಿ ಬಳಿ ತೊಳೆಯುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಚಿಕ್ಕ ಮಕ್ಕಳು ತೆರೆದ ಚರಂಡಿ ಪಕ್ಕದಲ್ಲಿ ಪೈಪ್ ನೀರನ್ನು ಬಳಸಿ ತಮ್ಮ ಮಧ್ಯಾಹ್ನದ ಊಟದ ತಟ್ಟೆಗಳನ್ನು ತೊಳೆಯುತ್ತಿರುವುದನ್ನು ತೋರಿಸಿದ್ದು, ನೈರ್ಮಲ್ಯ ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ. ವಿವಿಧ ಯೋಜನೆಗಳ ಭಾಗವಾಗಿ ಸರ್ಕಾರಿ ಶಾಲೆಗಳಲ್ಲಿ ಸುಧಾರಣೆಗಳ ಬಗ್ಗೆ ಪದೇ ಪದೇ ಹೇಳಿಕೊಳ್ಳುತ್ತಿದ್ದರೂ, ಪ್ರಸ್ತುತ ಪ್ರಕರಣವು ಗ್ರಾಮೀಣ ಪ್ರದೇಶದ
Read Moreಫೆಬ್ರವರಿ 1 ಭಾರತ ಬಂದ್! ಕಾರಣ ಗೊತ್ತಾ?
ನವದೆಹಲಿ: ದೇಶದಾದ್ಯಂತ ಯುಜಿಸಿ ನಿಯಮಗಳು ಭಾರೀ ಘರ್ಷಣೆಗೆ ಕಾರಣವಾಗಿದೆ. ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದರೂ, ಅವುಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿವೆ. ಇದಲ್ಲದೇ ಇದರಿಂದ ಕೆರಳಿದ ಕೆಲ ಸಂಘಟನೆಗಳು ಭಾರತ್ ಬಂದ್ ಘೋಷಣೆ ಮಾಡಿವೆ. ಮೇಲ್ಜಾತಿಗಳೆಂದು ಕರೆಯಲ್ಪಡುವ ಸಮುದಾಯದವರು ಈ ಯುಜಿಸಿ ನಿಯಮಗಳು ತಮ್ಮನ್ನು ಅಪರಾಧಿಗಳಂತೆ ಚಿತ್ರಿಸುತ್ತಿವೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ,
Read MoreViral Story : ಕರ್ನಾಟಕದ ಬಾಲಕನ ಇಂಗ್ಲಿಷ್ ಕಾಮೆಂಟ್ರಿಗೆ ನೆಟ್ಟಿಗರು ಫಿದಾ
ಸ್ಥಳೀಯ ಕ್ರಿಕೆಟ್ ಪಂದ್ಯವೊಂದರ ಪಕ್ಕದಲ್ಲೇ ಕುಳಿತು ನೀಡಿದ ಕಾಮೆಂಟ್ರಿಯಿಂದ ಕರ್ನಾಟಕದ ಬಾಲಕನೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾನೆ. ಜಸ್ವಿತ್ ಕಣ್ಣಡ್ಕ ಎಂಬ ಬಾಲಕನ ಆತ್ಮವಿಶ್ವಾಸಭರಿತ ಹಾಗೂ ಸ್ಪಷ್ಟ ಇಂಗ್ಲಿಷ್ ಕಾಮೆಂಟ್ರಿ ಇದೀಗ ವೈರಲ್ ಆಗಿದೆ.
Read Moreಸಂಪಾಜೆಯಲ್ಲಿ ಭೀಕರ ಅಪಘಾತ: ಆಟೋ ಚಾಲಕ ಸಾವು; ವಿಡಿಯೋ ಇಲ್ಲಿದೆ
ಸಂಪಾಜೆ: ಕಾರೊಂದು ರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದು ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ಕೊಡಗು ಸಂಪಾಜೆ ಗೇಟಿನ ಬಳಿ ಸಂಭವಿಸಿದೆ.
Read MoreShocking: ಸಿದ್ದಾಪುರದಲ್ಲಿ ಶಾಲಾ ಬಸ್ ಅನ್ನು ಬೆನ್ನಟ್ಟಿ ಬಂದ ಕಾಡಾನೆ, ವಿಡಿಯೋ!
ಸಿದ್ದಾಪುರ: ಸ್ಕೂಲ್ ಬಸ್ ಅನ್ನು ಒಂಟಿ ಸಲಗವೊಂದು ಅಟ್ಟಾಡಿಸಿಕೊಂಡು ಬಂದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ಮಾಲ್ದಾರೆ ವ್ಯಾಪ್ತಿಯಲ್ಲಿ ನಡೆದಿದ್ದು , ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳು ಭಯದಲ್ಲಿ ಕಿರುಚಾಡಿದ್ದಾರೆ.
Read Moreಇಡಗುಂಜಿ ಗಣಪತಿ ದೇವಸ್ಥಾನದ ಕಾಣಿಕೆ ಹಣಕ್ಕಾಗಿ ಅರ್ಚಕರ ನಡುವೆ ಕಾಳಗ! ವಿಡಿಯೋ ಇಲ್ಲಿದೆ
ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯ ಇಡಗುಂಜಿ ಗಣಪತಿ ದೇವಾಲಯದ ಇಬ್ಬರು ಅರ್ಚಕರ ನಡುವೆ ಕಾಣಿಕೆ ಹಣಕ್ಕಾಗಿ ಜಗಳ ನಡೆದಿದೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
Read Moreಮಹಾರಾಷ್ಟ್ರ ದುರಂತ: ಬೆಂಕಿಯ ತೀವ್ರತೆಯಿಂದ ಒಳಗಿದ್ದವರನ್ನು ಹೊರಗೆಳಯಲಾಗಲಿಲ್ಲ: ಪ್ರತ್ಯಕ್ಷ ದರ್ಶಿ
ಮುಂಬೈ: ಬಾರಾಮತಿ ವಿಮಾನ ಅಪಘಾತದ ಪ್ರತ್ಯಕ್ಷದರ್ಶಿಯೊಬ್ಬರು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ ಮತ್ತು ವಿಮಾನವು ಭಾರಿ ಬೆಂಕಿಗೆ ಆಹುತಿಯಾದಾಗ ಸ್ಥಳೀಯರು ವಿಮಾನದಲ್ಲಿದ್ದ ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
Read MoreIllegal liquor : ಮಧ್ಯಪ್ರದೇಶದಲ್ಲಿ ಅಕ್ರಮ ಮದ್ಯ ದಾಳಿ ವೇಳೆ ಹೃದಯವಿದ್ರಾವಕ ಘಟನೆ
ದಾಟಿಯಾ ಜಿಲ್ಲೆಯಲ್ಲಿ ಅಕ್ರಮ ಮದ್ಯ ತಯಾರಿಕೆ ವಿರುದ್ಧ ನಡೆದ ಪೊಲೀಸ್ ಇಲಾಖೆಯ ಸಂಯುಕ್ತ ದಾಳಿ ಭಾನುವಾರ ಭಾವನಾತ್ಮಕ ತಿರುವು ಪಡೆದುಕೊಂಡಿದೆ. ಬಂಧನದ ಭಯದಿಂದ ಕುಟುಂಬದ ಎಲ್ಲಾ ವಯಸ್ಕರು ಪರಾರಿಯಾಗಿದ್ದು, ಮನೆಯ ಮೇಲ್ಚಾವಣಿಯಲ್ಲಿ ಮೂರು ತಿಂಗಳ ಶಿಶುವೊಂದು ಹಸಿವು ಮತ್ತು ಚಳಿಯಿಂದ ಅಳುತ್ತಿದ್ದುದು ಪೊಲೀಸರ ಗಮನಕ್ಕೆ ಬಂದಿರುವುದು ವರದಿಯಾಗಿದೆ.
Read More
