Breaking News

ಇಂದಿನ ದಿನಭವಿಷ್ಯ: ದ್ವಾದಶ ರಾಶಿಗಳ ಭವಿಷ್ಯಫಲ, ಅದೃಷ್ಟ ಸಂಖ್ಯೆ ಹಾಗೂ ಪರಿಹಾರಗಳ ಸಂಪೂರ್ಣ ಮಾಹಿತಿ

ಗ್ರಹಗಳ ಸಂಚಾರ ಹಾಗೂ ಚಂದ್ರನ ಸ್ಥಾನಪಲ್ಲಟದ ಆಧಾರದ ಮೇಲೆ ಇಂದಿನ ದ್ವಾದಶ ರಾಶಿಗಳ ಫಲಗಳು ಹೇಗಿರಲಿವೆ? ಯಾವ ರಾಶಿಯವರಿಗೆ ಧನಯೋಗವಿದೆ, ಯಾರಿಗೆ ಜಾಗ್ರತೆ ಅಗತ್ಯ? ಇಲ್ಲಿದೆ ಇಂದಿನ ದಿನಭವಿಷ್ಯದ ವಿಸ್ತೃತ ವರದಿ.

♈ ಮೇಷ ರಾಶಿ (Aries)
ವಿಶಾಖಾ ನಕ್ಷತ್ರದಲ್ಲಿ ಚಂದ್ರನ ಸಂಚಾರದಿಂದ ಆರ್ಥಿಕವಾಗಿ ಉತ್ತಮ ದಿನ. ಐದು ಗ್ರಹಗಳ ಶುಭಫಲದಿಂದ ವಾಹನ ಯೋಗ ಹಾಗೂ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ವಿದ್ಯಾರ್ಥಿಗಳು, ರೈತರು ಹಾಗೂ ಉದ್ದಿಮೆದಾರರಿಗೆ ಶುಭ. ವೃತ್ತಿಜೀವನದಲ್ಲಿ ಸಣ್ಣಪುಟ್ಟ ಗೊಂದಲಗಳಿರಬಹುದು. ಮಹಿಳೆಯರನ್ನು ಚಿಂತೆ ಕಾಡಬಹುದು.

ಅದೃಷ್ಟ ಸಂಖ್ಯೆ: 5 | ಅದೃಷ್ಟ ಬಣ್ಣ: ಕಿತ್ತಳೆ | ಶುಭ ದಿಕ್ಕು: ಪೂರ್ವ

ಪರಿಹಾರ: ‘ಓಂ ನಮೋ ನಾರಾಯಣಾಯ’ ಮಂತ್ರ ಜಪಿಸಿ.

♉ ವೃಷಭ ರಾಶಿ (Taurus)
ಐದು ಗ್ರಹಗಳ ಶುಭಫಲವಿದ್ದು, ಹೂಡಿಕೆಯ ಆಲೋಚನೆ ಹಾಗೂ ಆಕಸ್ಮಿಕ ಧನಯೋಗವಿದೆ. ಹಳೆ ಬಾಕಿ ವಸೂಲಿಯಾಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಸರ್ಕಾರಿ ನೌಕರರು, ರೈತರು, ಸಾಹಿತಿಗಳು, ನಟರು ಮತ್ತು ಪತ್ರಕರ್ತರಿಗೆ ಶುಭ ದಿನ. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಇರಲಿದೆ.

ಅದೃಷ್ಟ ಸಂಖ್ಯೆ: 6 | ಅದೃಷ್ಟ ಬಣ್ಣ: ಬಿಳಿ | ಶುಭ ದಿಕ್ಕು: ದಕ್ಷಿಣ

ಪರಿಹಾರ: ‘ಓಂ ಶ್ರೀಪತಯೇ ನಮಃ’ ಮಂತ್ರ ಜಪಿಸಿ.

♊ ಮಿಥುನ ರಾಶಿ (Gemini)
ನಾಲ್ಕು ಗ್ರಹಗಳ ಶುಭಫಲವಿದೆ. ಮಾನಸಿಕ ಒತ್ತಡ ಹಾಗೂ ಚಂಚಲ ಮನಸ್ಸು ಕಾಡಬಹುದು. ನ್ಯಾಯಾಂಗ ವಿಷಯಗಳಲ್ಲಿ ಶುಭ ಫಲ ಸಿಗಲಿದೆ. ವ್ಯಾಪಾರ, ಪ್ರೇಮ ವ್ಯವಹಾರ ಹಾಗೂ ಆಸ್ತಿ ವಿಚಾರದಲ್ಲಿ ಲಾಭಗಳಿವೆ. ಪುಸ್ತಕ ವ್ಯಾಪಾರಿಗಳು ಮತ್ತು ಇನ್ಶೂರೆನ್ಸ್ ಏಜೆಂಟ್‌ಗಳಿಗೆ ಉತ್ತಮ ದಿನ.

ಅದೃಷ್ಟ ಸಂಖ್ಯೆ: 7 | ಅದೃಷ್ಟ ಬಣ್ಣ: ಹಳದಿ | ಶುಭ ದಿಕ್ಕು: ಪಶ್ಚಿಮ

ಪರಿಹಾರ: ‘ಓಂ ನರಸಿಂಹಾಯ ನಮಃ’ ಮಂತ್ರ ಜಪಿಸಿ.

♋ ಕರ್ಕಾಟಕ ರಾಶಿ (Cancer)
ಆರು ಗ್ರಹಗಳ ಶುಭಫಲದಿಂದ ಬಾಕಿ ಉಳಿದ ಕೆಲಸಗಳು ಪೂರ್ಣಗೊಳ್ಳುತ್ತವೆ. ಕುಟುಂಬದ ಸಪೋರ್ಟ್ ದೊರೆಯಲಿದೆ. ಉದ್ಯೋಗದಲ್ಲಿ ಬದಲಾವಣೆ ಹಾಗೂ ಪ್ರವಾಸ ಯೋಗವಿದೆ. ವಿವಾಹ ವಿಷಯಗಳಲ್ಲಿ ವಿಳಂಬ ಹಾಗೂ ಪ್ರೀತಿಯಲ್ಲಿ ಕಲಹದ ಚಿಂತೆ ಕಾಡಬಹುದು. ರಾಜಕೀಯ ವ್ಯಕ್ತಿಗಳು, ರೈತರು, ವಿದ್ಯಾರ್ಥಿಗಳಿಗೆ ಉತ್ತಮ ದಿನ.

ಅದೃಷ್ಟ ಸಂಖ್ಯೆ: 3 | ಅದೃಷ್ಟ ಬಣ್ಣ: ಗುಲಾಬಿ | ಶುಭ ದಿಕ್ಕು: ಉತ್ತರ

ಪರಿಹಾರ: ‘ಓಂ ಚಕ್ರಪಾಣಯೇ ನಮಃ’ ಮಂತ್ರ ಜಪಿಸಿ.

♌ ಸಿಂಹ ರಾಶಿ (Leo)
ಐದು ಗ್ರಹಗಳ ಶುಭಫಲವಿದ್ದರೂ ಆತುರದ ನಿರ್ಧಾರ ಮತ್ತು ನಿರ್ಲಕ್ಷ್ಯ ಬೇಡ. ಕ್ರೀಡಾಪಟುಗಳು, ನಿವೃತ್ತ ನೌಕರರು, ವ್ಯಾಪಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳಿಗೆ ಅತ್ಯುತ್ತಮ ದಿನ. ತಂದೆ-ತಾಯಿಗಳ ಆಶೀರ್ವಾದ, ಆಕಸ್ಮಿಕ ಪ್ರಯಾಣ ಹಾಗೂ ವಾಹನ ಯೋಗವಿದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಅದೃಷ್ಟ ಸಂಖ್ಯೆ: 9 | ಅದೃಷ್ಟ ಬಣ್ಣ: ನೀಲಿ | ಶುಭ ದಿಕ್ಕು: ಉತ್ತರ

ಪರಿಹಾರ: ‘ಓಂ ದಾಮೋದರಾಯ ನಮಃ’ ಮಂತ್ರ ಜಪಿಸಿ.

♍ ಕನ್ಯಾ ರಾಶಿ (Virgo)
ಬುಧ ಉಚ್ಚಸ್ಥಾನದಲ್ಲಿರುವ ಕಾರಣ ಉತ್ತಮ ಮಾತುಗಾರಿಕೆಯಿಂದ ಕಾರ್ಯ ಸಿದ್ಧಿಯಾಗಲಿದೆ. ವೃತ್ತಿಯಲ್ಲಿ ಬಡ್ತಿ ಹಾಗೂ ಹಣಕಾಸಿನ ಶುಭ ಸುದ್ದಿ ಸಿಗಲಿದೆ. ಖಾಸಗಿ ಉದ್ಯೋಗಸ್ಥರಿಗೆ ಮನೆ ಅಥವಾ ಉದ್ಯೋಗ ಬದಲಾವಣೆಯ ಯೋಗವಿದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.

ಅದೃಷ್ಟ ಸಂಖ್ಯೆ: 4 | ಅದೃಷ್ಟ ಬಣ್ಣ: ಕಂದು | ಶುಭ ದಿಕ್ಕು: ಪಶ್ಚಿಮ

ಪರಿಹಾರ: ‘ಓಂ ಗರುಡಧ್ವಜಾಯ ನಮಃ’ ಮಂತ್ರ ಜಪಿಸಿ.

♎ ತುಲಾ ರಾಶಿ (Libra)
ಆರು ಗ್ರಹಗಳ ಶುಭಫಲದಿಂದ ಅದೃಷ್ಟ ಒಲಿಯಲಿದೆ. ಸ್ವಂತ ಉದ್ದಿಮೆದಾರರಿಗೆ ಶುಭ ಫಲ, ಸಾಲ ತೀರಿಸುವ ಪ್ರಯತ್ನ ಯಶಸ್ವಿಯಾಗಲಿದೆ. ಮನೆ, ಸೈಟ್ ಗೊಂದಲಗಳು ನಿವಾರಣೆಯಾಗಲಿವೆ. ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ಹಾಗೂ ವಿದೇಶದಲ್ಲಿದ್ದವರಿಗೆ ಜವಾಬ್ದಾರಿ ಹೆಚ್ಚಳವಾಗಲಿದೆ.

ಅದೃಷ್ಟ ಸಂಖ್ಯೆ: 2 | ಅದೃಷ್ಟ ಬಣ್ಣ: ಗುಲಾಬಿ | ಶುಭ ದಿಕ್ಕು: ಪೂರ್ವ

ಪರಿಹಾರ: ‘ಓಂ ಚತುರ್ಭುಜಾಯ ನಮಃ’ ಮಂತ್ರ ಜಪಿಸಿ.

♏ ವೃಶ್ಚಿಕ ರಾಶಿ (Scorpio)
ಐದು ಗ್ರಹಗಳ ಶುಭಫಲದಿಂದ ಉದ್ಯೋಗ ಹಾಗೂ ವ್ಯಾಪಾರಸ್ಥರಿಗೆ ಅನುಕೂಲ. ಮಹಿಳೆಯರಿಗೆ ಹಳೆ ಬಾಕಿ ವಸೂಲಿ ಹಾಗೂ ರಾಜಕೀಯ ಪ್ರಗತಿಯಿದೆ. ರೈಲ್ವೆ, ಗಣಿ, ಹಾರ್ಡ್‌ವೇರ್ ಹಾಗೂ ಆರ್ಮಿ ನೌಕರರಿಗೆ ಶುಭ. ವಾಹನ ರಿಪೇರಿ ಹಾಗೂ ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆಯಿದೆ.

ಅದೃಷ್ಟ ಸಂಖ್ಯೆ: 9 | ಅದೃಷ್ಟ ಬಣ್ಣ: ಕಪ್ಪು | ಶುಭ ದಿಕ್ಕು: ದಕ್ಷಿಣ

ಪರಿಹಾರ: ‘ಓಂ ಹೃಷಿಕೇಶಾಯ ನಮಃ’ ಮಂತ್ರ ಜಪಿಸಿ.

♐ ಧನು ರಾಶಿ (Sagittarius)
ನಾಲ್ಕು ಗ್ರಹಗಳ ಶುಭಫಲವಿದೆ. ಧರ್ಮ ಕಾರ್ಯಗಳಲ್ಲಿ ಭಾಗಿ. ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರದಂತೆ ಸ್ವಂತ ಮನಸ್ಸಿನಿಂದ ನಿರ್ಧಾರ ತಗೊಳ್ಳಿ. ಉದ್ಯೋಗ ಬದಲಾವಣೆ, ವಿವಾಹ ಯೋಗ, ಮನೆ/ಸೈಟ್ ಖರೀದಿ ಹಾಗೂ ಲೋನ್ ಮಂಜೂರಾಗುವ ಸಾಧ್ಯತೆಯಿದೆ. ಗುತ್ತಿಗೆದಾರರಿಗೆ ಶುಭ ದಿನ.

ಅದೃಷ್ಟ ಸಂಖ್ಯೆ: 8 | ಅದೃಷ್ಟ ಬಣ್ಣ: ನೇರಳೆ | ಶುಭ ದಿಕ್ಕು: ಪೂರ್ವ

ಪರಿಹಾರ: ‘ಓಂ ಗೋವರ್ಧನಧರಾಯ ನಮಃ’ ಮಂತ್ರ ಜಪಿಸಿ.

♑ ಮಕರ ರಾಶಿ (Capricorn)
ಐದು ಗ್ರಹಗಳ ಶುಭಫಲದಿಂದ ಗೌರವ, ಕೀರ್ತಿ, ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರ ವಿಸ್ತರಣೆ ಹಾಗೂ ಅಧಿಕಾರ ಪ್ರಾಪ್ತಿಯ ಯೋಗವಿದೆ. ಐಟಿ ಇಂಜಿನಿಯರ್‌ಗಳು, ವೈದ್ಯರಿಗೆ ಸರ್ಕಾರಿ ಸವಲತ್ತುಗಳು ದೊರೆಯಲಿವೆ. ಆರ್ಥಿಕವಾಗಿ ಉತ್ತಮ ದಿನವಾಗಿದ್ದು, ಯಂತ್ರಗಳ ರಿಪೇರಿ ಬರಬಹುದು.

ಅದೃಷ್ಟ ಸಂಖ್ಯೆ: 2 | ಅದೃಷ್ಟ ಬಣ್ಣ: ನೀಲಿ | ಶುಭ ದಿಕ್ಕು: ದಕ್ಷಿಣ

ಪರಿಹಾರ: ‘ಓಂ ಜನಾರ್ಧನಾಯ ನಮಃ’ ಮಂತ್ರ ಜಪಿಸಿ.

♒ ಕುಂಭ ರಾಶಿ (Aquarius)
ನಾಲ್ಕು ಗ್ರಹಗಳ ಶುಭಫಲ. ರಾಜಕೀಯ ಅಭಿವೃದ್ಧಿ, ವಾಹನ ಯೋಗ ಹಾಗೂ ಮಕ್ಕಳಿಂದ ಶುಭ ಸುದ್ದಿ. ಪಾಲುದಾರಿಕೆಯಲ್ಲಿ ಮಾನಸಿಕ ಹಿಂಸೆ, ಬಾಡಿಗೆದಾರರೊಂದಿಗೆ ಕಲಹ ಅಥವಾ ವಿವಾಹ ವಿಳಂಬ ಸಾಧ್ಯತೆ. ಖಾಸಗಿ ಉದ್ಯೋಗಿಗಳಿಗೆ ಶುಭ ದಿನ.

ಅದೃಷ್ಟ ಸಂಖ್ಯೆ: 6 | ಅದೃಷ್ಟ ಬಣ್ಣ: ತಿಳಿ ನೀಲಿ | ಶುಭ ದಿಕ್ಕು: ಪಶ್ಚಿಮ

ಪರಿಹಾರ: ‘ಓಂ ಶ್ರೀನಿವಾಸಾಯ ನಮಃ’ ಮಂತ್ರ ಜಪಿಸಿ.

♓ ಮೀನ ರಾಶಿ (Pisces)
ನಾಲ್ಕು ಗ್ರಹಗಳ ಶುಭಫಲದಿಂದ ಸವಾಲುಗಳನ್ನು ಎದುರಿಸಿ ಗುರಿ ತಲುಪುವಿರಿ. ಹಿತಶತ್ರುಗಳ ಕಾಟ ಕಡಿಮೆಯಾಗಿ ರಾಜಕೀಯ ಪ್ರಗತಿ ಸಿಗಲಿದೆ. ರೈತರು ಹಾಗೂ ವ್ಯಾಪಾರಸ್ಥರಿಗೆ ಅನುಕೂಲ. ಪ್ರೇಮ ವ್ಯವಹಾರಗಳಲ್ಲಿ ಅಡ್ಡಿ-ಆತಂಕ ಹಾಗೂ ವಾಹನ ಕಿರಿಕಿರಿ ಇರಬಹುದು.

ಅದೃಷ್ಟ ಸಂಖ್ಯೆ: 1 | ಅದೃಷ್ಟ ಬಣ್ಣ: ಹಳದಿ | ಶುಭ ದಿಕ್ಕು: ಉತ್ತರ

ಪರಿಹಾರ: ‘ಓಂ ರುಕ್ಮಿಣಿ ರಮಣಾಯ ನಮಃ’ ಮಂತ್ರ ಜಪಿಸಿ.

Leave a Reply

Your email address will not be published. Required fields are marked *