ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಪಂಜರ ಪ್ರಕರಣ: ಮೂರೂ ಅಸ್ಥಿಪಂಜರಗಳ ‘ಡಿಎನ್‌ಎ’ ದೃಢ, ಮೃತರ ಗುರುತು ಪತ್ತೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿಯ ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾಗಿದ್ದ ಮೂರು ಅಸ್ಥಿಪಂಜರಗಳ ರಹಸ್ಯ ಸದ್ಯ ಬಯಲಾಗಿದ್ದು, ವೈಜ್ಞಾನಿಕ ಡಿಎನ್‌ಎ (DNA) ಪರಿಶೀಲನೆಯಲ್ಲಿ ಮೃತರ ಗುರುತು ಸಂಪೂರ್ಣವಾಗಿ ಪತ್ತೆಯಾಗಿದೆ.

ಸಂಶಯಾಸ್ಪದ ರೀತಿಯಲ್ಲಿ ಸಿಕ್ಕಿದ್ದ ಈ ಅಸ್ಥಿಪಂಜರಗಳ ಸತ್ಯಾಸತ್ಯತೆ ತಿಳಿಯಲು ಮೃತರ ಕುಟುಂಬಸ್ಥರ ರಕ್ತದ ಮಾದರಿಯನ್ನು ಪಡೆದು ಡಿಎನ್‌ಎ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಬಂದಿರುವ ವರದಿಯಲ್ಲಿ ಕುಟುಂಬಸ್ಥರ ಡಿಎನ್‌ಎಗೆ ಅಸ್ಥಿಪಂಜರಗಳ ಡಿಎನ್‌ಎ ಸಂಪೂರ್ಣವಾಗಿ ಮ್ಯಾಚ್ (ದೃಢ) ಆಗಿದೆ.

ಯು.ಬಿ. ಅಯ್ಯಪ್ಪ (70 ವರ್ಷ) ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ನಿವಾಸಿ. ಆದಿಶೇಷ (27 ವರ್ಷ) ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರಕಲ್ಲಹಳ್ಳಿ ನಿವಾಸಿ. ಕೃಷ್ಣಪ್ಪ (85 ವರ್ಷ)ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮೀಸಗಾಣಹಳ್ಳಿ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.

ಇದನ್ನೂ ಓದಿ: ಬಂಟ್ವಾಳ ಲಾವಣ್ಯ ಬರ್ಬರ ಹತ್ಯೆ ಪ್ರಕರಣ: ಆರೋಪಿ ಚೇತನ್ 4 ದಿನ ಪೊಲೀಸ್ ಕಸ್ಟಡಿಗೆ

ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಜುಲೈ 15ರಂದು ಸಲ್ಲಿಸಿದ್ದ ವರದಿಯಲ್ಲಿ ಈ ಮಹತ್ವದ ತನಿಖಾ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಮೃತರ ಕುಟುಂಬಸ್ಥರು ಅಸ್ಥಿಪಂಜರಗಳನ್ನು ಪಡೆದುಕೊಂಡು ಅಂತಿಮ ಸಂಸ್ಕಾರ ನಡೆಸಲು ಇಚ್ಛಿಸಿದರೆ, ಎಸ್‌ಐಟಿಗೆ (SIT) ಅಧಿಕೃತವಾಗಿ ಮನವಿ ಸಲ್ಲಿಸಿ ಅಸ್ಥಿಪಂಜರಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *