ಇಂದಿನ ಚಿನ್ನದ ದರ ಏರಿಕೆ: ಸೆ. 12 ರಂದು ಮತ್ತೆ ಜಿಗಿದ ಬಂಗಾರದ ಬೆಲೆ, ಇಲ್ಲಿದೆ ಪ್ರಮುಖ ನಗರಗಳ ದರ ಪಟ್ಟಿ

ಶುಕ್ರವಾರ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದ್ದರಿಂದ ಹಬ್ಬದ ಸಂದರ್ಭದಲ್ಲಿ ಚಿನ್ನ ಖರೀದಿಸಲು ಮುಂದಾಗಿದ್ದ ಗ್ರಾಹಕರಿಗೆ ಕೊಂಚ ನಿರಾಳತೆ ಸಿಕ್ಕಿತ್ತು. ಆದರೆ ಇದೀಗ ಸೆಪ್ಟೆಂಬರ್‌ 12, ಶನಿವಾರದ ಬೆಳಗಿನ ವಹಿವಾಟಿನಲ್ಲಿ ಚಿನ್ನದ ಬೆಲೆಯಲ್ಲಿ ಮತ್ತೆ ಅಲ್ಪ ಏರಿಕೆ ದಾಖಲಾಗಿದೆ. ಹಬ್ಬದ ಸಸಂಭ್ರಮದ ವೇಳೆಯಲ್ಲೇ ಬಂಗಾರದ ಬೆಲೆ ಮತ್ತೆ ಏರಿಕೆಯತ್ತ ಮುಖ ಮಾಡಿರುವುದು ಖರೀದಿದಾರರ ಗಮನ ಸೆಳೆದಿದೆ.

ಬೆಂಗಳೂರಿನಲ್ಲಿ ಇಂದಿನ ಬಂಗಾರದ ಬೆಲೆ ವಿವರ:

ಬೆಂಗಳೂರಿನ ಮಾರುಕಟ್ಟೆಯಲ್ಲಿ ಶನಿವಾರ ಬೆಳಗಿನ ವಹಿವಾಟಿನಲ್ಲಿ ಎಲ್ಲಾ ಕ್ಯಾರೆಟ್‌ನ ಚಿನ್ನದ ದರದಲ್ಲೂ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ:

24 ಕ್ಯಾರೆಟ್ ಶುದ್ಧ ಚಿನ್ನ: ಶುಕ್ರವಾರದ ಸಂಜೆಯ ದರಕ್ಕೆ ಹೋಲಿಸಿದರೆ ಪ್ರತಿ ಗ್ರಾಂಗೆ ₹16ರಷ್ಟು ಏರಿಕೆಯಾಗಿದೆ. ಇದರೊಂದಿಗೆ 1 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ₹15,458 ಕ್ಕೆ ತಲುಪಿದ್ದರೆ, 10 ಗ್ರಾಂ ಚಿನ್ನದ ಬೆಲೆ ₹1,54,580 ಕ್ಕೆ ತಲುಪಿದೆ.

22 ಕ್ಯಾರೆಟ್ ಆಭರಣ ಚಿನ್ನ: ಆಭರಣ ಚಿನ್ನದ ದರ ಪ್ರತಿ ಗ್ರಾಂಗೆ ₹15ರಷ್ಟು ಹೆಚ್ಚಾಗಿದೆ. 1 ಗ್ರಾಂಗೆ ₹14,170 ಹಾಗೂ 10 ಗ್ರಾಂಗೆ ₹1,41,700 ಆಗಿದೆ.

18 ಕ್ಯಾರೆಟ್ ಚಿನ್ನ: 18 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ ₹12ರಷ್ಟು ಹೆಚ್ಚಾಗಿದ್ದು, 1 ಗ್ರಾಂಗೆ ₹11,594 ಹಾಗೂ 10 ಗ್ರಾಂಗೆ ₹1,15,940 ಕ್ಕೆ ಬಂದಿದೆ.

ಇದನ್ನೂ ಓದಿ: ಗೌರಿ-ಗಣೇಶ ಹಬ್ಬಕ್ಕೆ ‘ಕೆಎಸ್‌ಆರ್‌ಟಿಸಿ’ ಬಿಗ್ ಆಫರ್: ಬೆಂಗಳೂರಿನಿಂದ 2,400 ಹೆಚ್ಚುವರಿ ವಿಶೇಷ ಬಸ್‌ಗಳ ಸಂಚಾರ

ಗಣೇಶ ಚತುರ್ಥಿ ಸೇರಿದಂತೆ ಸಾಲು ಸಾಲು ಹಬ್ಬದ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಳೆದ ಕೆಲವು ದಿನಗಳಲ್ಲಿ ಕಂಡುಬಂದ ಇಳಿಕೆ ಖರೀದಿದಾರರಿಗೆ ಕೊಂಚ ಅನುಕೂಲ ತಂದಿತ್ತಾದರೂ, ಶನಿವಾರದ ಬೆಲೆ ಏರಿಕೆ ಗ್ರಾಹಕರಲ್ಲಿ ಮತ್ತೆ ಆತಂಕ ಮೂಡಿಸಿದೆ. ಮುಂದಿನ ದಿನಗಳಲ್ಲಿ ಚಿನ್ನದ ದರ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಮಾರುಕಟ್ಟೆ ತಜ್ಞರಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ