ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಪದಗ್ರಹಣ

ಮಂಗಳೂರು: ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಪ್ರಕೋಷ್ಠದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣವು ಜೂ.26 ರಂದು ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವು ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆಯಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಸಂಚಾಲಕ ಶ್ರೀಧರ ಶೆಟ್ಟಿ ಪುಳಿಂಚ ಅವರು ಕಾನೂನು ಪ್ರಕೋಷ್ಠದ ನೂತನ ಜಿಲ್ಲಾ ಸಮಿತಿ ಸದಸ್ಯರನ್ನು ಹಾಗೂ ಮಂಡಲ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ಘೋಷಿಸಿದರು.

Advertisement

ನೂತನ ಜಿಲ್ಲಾ ಸಮಿತಿ ಸದಸ್ಯರಾಗಿ ಪುರುಷೋತ್ತಮ ಭಟ್, ಎನ್. ನರಸಿಂಹ ಹೆಗ್ಡೆ, ಪುರಂದರ ಶೆಟ್ಟಿ ಬಲ್ಯ, ವೇಣು ಕುಮಾರ್, ಶ್ರೀಧರ್ ಸುವರ್ಣ, ಸಂದೀಪ್ ವಳಲಂಬೆ, ಅಕ್ಷತಾ ಅವರು ಅಧಿಕಾರ ಸ್ವೀಕರಿಸಿದರು.

ಇದನ್ನೂ ಓದಿ: ಪುತ್ತೂರಿನ ನೆಹರುನಗರದಲ್ಲಿ ಜೂನ್ 29ಕ್ಕೆ ಸರಸ್ವತಿ ಸೌಹಾರ್ದ ಸಹಕಾರಿಯ ನೂತನ 21ನೇ ಶಾಖೆ ಶುಭಾರಂಭ; ಡಾ. ಪ್ರಭಾಕರ ಭಟ್ ಕಲ್ಲಡ್ಕರಿಂದ ಉದ್ಘಾಟನೆ

ಮಂಡಲದ ಸಂಚಾಲಕರು ಮತ್ತು ಸಹ ಸಂಚಾಲಕರನ್ನಾಗಿ ಶಶಿಕುಮಾರ್ ಮೂಲ್ಕಿ, ಶುಕರಾಜ್ ಎಸ್ ಕೊಟ್ಟಾರಿ, ಶಿವರಾಜ್ ಶೆಟ್ಟಿ, ಚಂದ್ರಹಾಸ್ ಕೊಟ್ಟಾರಿ, ದಿನೇಶ್ ಎನ್, ಬಾಲಕೃಷ್ಣ ಎ ಉಳ್ಳಾಲಬೈಲ್, ಅಭಿಲಾಷ್ ಶಾಸ್ತ್ರಿ, ವೀರೇಂದ್ರ ಎಂ ಸಿದ್ದಕಟ್ಟೆ, ರಮೇಶ್ ಕೆ ಮಠದಮೂಲೆ, ಕೃಷ್ಣಪ್ರಸಾದ್ ನಡ್ಸಾರ್, ಮಹೇಶ್ ಕೆ ಸವಣೂರು, ಸೌಮ್ಯ ಪಿ, ಯತೀಶ್ ಶೆಟ್ಟಿ ಪಣಿಕ್ಕರ, ಚೇತನ್ ಕುಮಾರ್ ಶೆಟ್ಟಿ, ಗೋವಿಂದರಾಜ್, ರವೀಂದ್ರನಾಥ್ ರೈ, ಶಶಿಕುಮಾರ್ ಕಲ್ಲುರಾಯ, ಸಂದೀಪ್ ಮದುವೆಗದ್ದೆ ಅವರು ಅಧಿಕಾರ ಸ್ವೀಕರಿಸಿದರು.

ಇದೇ ವೇಳೆ ಜಿಲ್ಲಾ ಪ್ರಕೋಷ್ಠದ ಸಂಯೋಜಕ ಸುಧೀರ್ ಶೆಟ್ಟಿ ಕಣ್ಣೂರು ಅತಿಥಿ ಭಾಷಣ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಮೋನಪ್ಪ ಭಂಡಾರಿಯವರು ಕಾನೂನು ಪ್ರಕೋಷ್ಠ ಬೆಳೆದು ಬಂದ ಹಾದಿ ಕುರಿತು ಮಾತನಾಡಿದರು.

ಜಿಲ್ಲಾ ಸಹಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಶೆ ಸ್ವಾಗತಿಸಿ, ಶ್ರೀಧರ್ ಸುವರ್ಣ ವಂದಿಸಿದರು. ಸಂದೀಪ್ ವಳಲಂಬೆ ನಿರೂಪಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪ್ರಕೋಷ್ಠದ ಸಹ ಸಂಯೋಜಕ ಪ್ರಸನ್ನ ದರ್ಬೆ, ಓಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಕೆ.ಸುಧಾಕರ ಜೋಷಿ ಉಪಸ್ಥಿತರಿದ್ದರು.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *