ಇನ್ಮುಂದೆ ಬೆಂಗಳೂರು ಟು ತುಮಕೂರು ಜಸ್ಟ್ 1 ಅವರ್!: ಹಳಿ ಏರಲಿದೆ ರಾಜ್ಯದ ಮೊದಲ ಅಂತರ್-ಜಿಲ್ಲಾ ಮೆಟ್ರೋ; ಬಿಎಂಆರ್‌ಸಿಎಲ್‌ನಿಂದ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಾದ್ಯಂತ ತನ್ನ ಜಾಲವನ್ನು ವಿಸ್ತರಿಸುತ್ತಿರುವ ‘ನಮ್ಮ ಮೆಟ್ರೊ’, ಇದೀಗ ನೆರೆಯ ಜಿಲ್ಲೆಗಳಿಗೂ ಲಗ್ಗೆ ಇಡಲು ಸಂಪೂರ್ಣ ಸಜ್ಜಾಗಿದೆ. ಕೆಲವು ಪ್ರದೇಶಗಳಲ್ಲಿ ಇನ್ನು ಮೆಟ್ರೊ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ, ಮುಂಬರುವ ಕೆಲವೇ ವರ್ಷಗಳಲ್ಲಿ ಇಡೀ ಬೆಂಗಳೂರು ಮೆಟ್ರೊಮಯ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರ ನಡುವೆಯೇ, ಬೆಂಗಳೂರು ಮತ್ತು ತುಮಕೂರು ನಡುವಿನ ಪ್ರಯಾಣದ ಸಮಯವನ್ನು ಕೇವಲ ಒಂದು ಗಂಟೆಗೆ ತಗ್ಗಿಸುವ ಬೃಹತ್ ಮೆಟ್ರೋ ವಿಸ್ತರಣೆ ಯೋಜನೆಗೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಈಗಾಗಲೇ ವಿವರವಾದ ಯೋಜನಾ ವರದಿಯನ್ನು (DPR) ಸರ್ಕಾರಕ್ಕೆ ಸಲ್ಲಿಸಿದೆ.

ಬೆಂಗಳೂರು ಮತ್ತು ತುಮಕೂರು ಎರಡು ಪ್ರತ್ಯೇಕ ಜಿಲ್ಲೆಗಳಾಗಿರುವ ಹಿನ್ನೆಲೆಯಲ್ಲಿ, ಈ ಯೋಜನೆ ಅನುಷ್ಠಾನಗೊಂಡರೆ ಇದು ಕರ್ನಾಟಕ ರಾಜ್ಯದ ಅತ್ಯಂತ ಮೊದಲ ‘ಅಂತರ್-ಜಿಲ್ಲಾ ಮೆಟ್ರೋ’ (Inter-District Metro) ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರಿಂದಾಗಿ ಪ್ರತಿದಿನ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರ ವಹಿವಾಟುಗಳಿಗಾಗಿ ಬೆಂಗಳೂರಿಗೆ ಬಂದು ಹೋಗುವ ಸಾವಿರಾರು ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ.

ಇದನ್ನೂ ಓದಿ: Train Ticket: 300 ರೈಲುಗಳಲ್ಲಿ OTP ಆಧಾರಿತ ಟಿಕೆಟ್ ವ್ಯವಸ್ಥೆ

ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಗಳು ಮತ್ತು ಸಂಪುಟ ರಚನೆಯ ಕಸರತ್ತುಗಳು ತಿಳಿಯಾದ ತಕ್ಷಣವೇ ಸರ್ಕಾರವು ಈ ಮೆಟ್ರೋ ಯೋಜನೆಯ ವರದಿಯನ್ನು ಕೈಗೆತ್ತಿಕೊಳ್ಳಲಿದೆ. ಸರ್ಕಾರದ ಹಸಿರು ನಿಶಾನೆ ಸಿಗುತ್ತಿದ್ದಂತೆ ಯೋಜನೆಗೆ ಅಧಿಕೃತವಾಗಿ ಚಾಲನೆ ಸಿಗಲಿದ್ದು, ಕಲ್ಪತರು ನಾಡು ತುಮಕೂರು ಮತ್ತು ರಾಜಧಾನಿ ಬೆಂಗಳೂರಿನ ನಡುವಿನ ಸಂಪರ್ಕ ಕ್ರಾಂತಿಗೆ ಹೊಸ ವೇಗ ಸಿಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು