ಬೀಜಿಂಗ್: ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂಬ ಹೆಗ್ಗಳಿಕೆಯನ್ನು ಇತ್ತೀಚಿನವರೆಗೂ ತನ್ನಲ್ಲೇ ಉಳಿಸಿಕೊಂಡಿದ್ದ ಚೀನಾ, ಈಗ ಜನನ ದರ (Birth Rate) ಭೀಕರವಾಗಿ ಕುಸಿಯುತ್ತಿರುವುದರಿಂದ ತೀವ್ರ ಕಂಗಾಲಾಗಿದೆ. ದೇಶದಲ್ಲಿ ಯುವಜನರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ, ವಯಸ್ಸಾದವರ (ವೃದ್ಧರ) ಸಂಖ್ಯೆ ಅತಿಯಾಗಿ ಹೆಚ್ಚುತ್ತಿರುವುದು ಚೀನಾ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ಜನಸಂಖ್ಯಾ ಬಿಕ್ಕಟ್ಟಿನಿಂದ ಪಾರಾಗಲು ಈಗ ಚೀನಾ ಸರ್ಕಾರ ಅತ್ಯಂತ ಆಕ್ರಮಣಕಾರಿ ನಿರ್ಧಾರವೊಂದಕ್ಕೆ ಕೈಹಾಕಿದೆ.
ಗರ್ಭನಿರೋಧಕ ಉತ್ಪನ್ನಗಳ ಮೇಲೆ ಚೀನಾ ಕಣ್ಣು!:
ದೇಶದಲ್ಲಿ ಜನಸಂಖ್ಯೆಯನ್ನು ಯಾವುದೇ ಮೌಲ್ಯದಲ್ಲಾದರೂ ಹೆಚ್ಚಿಸಲೇಬೇಕು ಎಂಬ ಹಠಕ್ಕೆ ಬಿದ್ದಿರುವ ಚೀನಾ ಸರ್ಕಾರ, ಗರ್ಭನಿರೋಧಕ ಉತ್ಪನ್ನಗಳ (Contraceptive Products) ಮುಕ್ತ ಮಾರಾಟ ಮತ್ತು ಬಳಕೆಯ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಆರಂಭಿಸಿದೆ. ಯುವ ಪೀಳಿಗೆಯು ಗರ್ಭಧಾರಣೆಯನ್ನು ಮುಂದೂಡುವುದನ್ನು ತಡೆಯಲು ಸರ್ಕಾರ ಈ ವಿಶಿಷ್ಟ ಹಾಗೂ ಕಠಿಣ ಕ್ರಮಕ್ಕೆ ಮುಂದಾಗಿದೆ.
ಇದನ್ನೂ ಓದಿ:ವಿದೇಶಿ ಪ್ರವಾಸ ಮಾಡುವವರಿಗೆ ಬಿಗ್ ರಿಲೀಫ್: ಹೊಸ ತೆರಿಗೆ ವದಂತಿಗಳನ್ನು ನೇರವಾಗಿ ತಳ್ಳಿಹಾಕಿದ ಪ್ರಧಾನಿ ಮೋದಿ!
ವಿಶ್ವದ ನಂ.1 ಬ್ರ್ಯಾಂಡ್ ‘ಡ್ಯುರೆಕ್ಸ್’ಗೆ ತಟ್ಟಿದ ಬಿಸಿ:
ಚೀನಾ ಸರ್ಕಾರದ ಈ ದಿಢೀರ್ ಆಕ್ರಮಣಕಾರಿ ನಿರ್ಧಾರವು ವಿಶ್ವದ ನಂಬರ್ ಒನ್ ಕಾಂಡೋಮ್ ಬ್ರ್ಯಾಂಡ್ ಆದ ‘ಡ್ಯುರೆಕ್ಸ್’ (Durex) ಕಂಪನಿಗೆ ಚೀನಾ ಮಾರುಕಟ್ಟೆಯಲ್ಲಿ ಚೇತರಿಸಿಕೊಳ್ಳಲಾಗದ ಭಾರಿ ಆಘಾತ ನೀಡಿದೆ. ಜಗತ್ತಿನ ಅತಿ ದೊಡ್ಡ ಮಾರುಕಟ್ಟೆಯಲ್ಲೇ ಕಾಂಡೋಮ್ ಮತ್ತು ಸುರಕ್ಷಿತ ಲೈಂಗಿಕ ಉತ್ಪನ್ನಗಳ ಮೇಲೆ ನಿರ್ಬಂಧ ಜಾರಿಯಾಗುತ್ತಿರುವುದರಿಂದ ಡ್ಯುರೆಕ್ಸ್ ಸೇರಿದಂತೆ ಹಲವು ಜಾಗತಿಕ ಕಂಪನಿಗಳ ವ್ಯಾಪಾರ ವಹಿವಾಟು ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ.
ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


