ಜೂನ್ 1 ರಿಂದ ಬದಲಾದವು 5 ದೊಡ್ಡ ನಿಯಮಗಳು!: ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ; ಇನ್ಮುಂದೆ ಕೆಲವೇ ಗಂಟೆಗಳಲ್ಲಿ ಸಿಗಲಿದೆ ಪ್ಯಾನ್ ಕಾರ್ಡ್!

ನವದೆಹಲಿ: ಹೊಸ ತಿಂಗಳು ಆರಂಭವಾಗುತ್ತಿದ್ದಂತೆ ದೇಶದಲ್ಲಿ ಸಾಮಾನ್ಯ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುವ ಹಲವು ಪ್ರಮುಖ ಆರ್ಥಿಕ ಮತ್ತು ಬ್ಯಾಂಕಿಂಗ್ ನಿಯಮಗಳು (Financial and Banking rules) ಬದಲಾಗಿವೆ. ಆದಾಯ ತೆರಿಗೆ ಸಲ್ಲಿಕೆದಾರರಿಂದ ಹಿಡಿದು ಸಾಮಾನ್ಯ ಯುಪಿಐ (UPI) ಬಳಕೆದಾರರವರೆಗೆ ಪ್ರತಿಯೊಬ್ಬ ನಾಗರಿಕರೂ ತಿಳಿಯಲೇಬೇಕಾದ ಪ್ರಮುಖ 5 ಬದಲಾವಣೆಗಳ ಸರಣಿ ಇಂದಿನಿಂದ ಜಾರಿಗೆ ಬಂದಿದೆ.

ಈ ಬದಲಾವಣೆಗಳಲ್ಲಿ ಅತ್ಯಂತ ಪ್ರಮುಖವಾದ ಪ್ಯಾನ್ ಕಾರ್ಡ್ ನಿಯಮದ ವಿವರ ಹೀಗಿದೆ:

ಪ್ಯಾನ್ ಕಾರ್ಡ್ ನಿಯಮ ಸರಳೀಕರಣ (PAN Card Rule Change):

ಕೇಂದ್ರ ಸರ್ಕಾರವು ಪ್ಯಾನ್ ಕಾರ್ಡ್  ವಿತರಣಾ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸಲು ಮತ್ತು ಸುಲಭಗೊಳಿಸಲು ಹೊಸ ನಿಯಮವನ್ನು ತಂದಿದೆ. ಇನ್ಮುಂದೆ ಹೊಸ ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವಾಗ ಅಥವಾ ಅದರಲ್ಲಿ ತಿದ್ದುಪಡಿ ಮಾಡುವಾಗ ಉಂಟಾಗುತ್ತಿದ್ದ ಅನಗತ್ಯ ವಿಳಂಬವನ್ನು ತಪ್ಪಿಸಲು ತಂತ್ರಜ್ಞಾನ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ:ಆರ್‌ಬಿಐನಿಂದ ಮತ್ತೆ ‘ಪ್ಲಾಸ್ಟಿಕ್ ನೋಟು’ ಚಲಾವಣೆ ಮಾಸ್ಟರ್ ಪ್ಲಾನ್!: ವರ್ಷಕ್ಕೆ 6,372 ಕೋಟಿ ದಾಟಿದ ಮುದ್ರಣ ವೆಚ್ಚ; ನೋಟು ಬ್ಯಾನ್ ವದಂತಿಯ ಅಸಲಿ ಸತ್ಯ ಇಲ್ಲಿದೆ!

ಕೆಲವೇ ಗಂಟೆಗಳಲ್ಲಿ ಸಿಗಲಿದೆ ಇ-ಪ್ಯಾನ್!:

ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದಾಗಿ ಇನ್ಮುಂದೆ ಅರ್ಜಿದಾರರು ದಿನಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಅರ್ಜಿ ಸಲ್ಲಿಸಿದ ಕೆಲವೇ ಗಂಟೆಗಳಲ್ಲಿ ತಮ್ಮ ಅಧಿಕೃತ ಇ-ಪ್ಯಾನ್ (e-PAN) ಪಡೆಯಲು ಸಾಧ್ಯವಾಗುತ್ತದೆ. ಇದು ತೆರಿಗೆ ಪಾವತಿದಾರರಿಗೆ ಹಾಗೂ ತುರ್ತಾಗಿ ಬ್ಯಾಂಕ್ ಖಾತೆ ತೆರೆಯುವವರಿಗೆ ದೊಡ್ಡ ರಿಲೀಫ್ ನೀಡಿದೆ.

ಉಳಿದಂತೆ ಯುಪಿಐ ವಹಿವಾಟು ಹಾಗೂ ಪ್ರಮುಖ ಬ್ಯಾಂಕಿಂಗ್ ಸೇವೆಗಳ ದರಗಳಲ್ಲೂ ಮಹತ್ವದ ಪರಿಷ್ಕರಣೆಗಳಾಗಿದ್ದು, ಗ್ರಾಹಕರು ತಮ್ಮ ದೈನಂದಿನ ಆರ್ಥಿಕ ವಹಿವಾಟು ನಡೆಸುವಾಗ ಈ ಹೊಸ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು