ಮುಂಬೈ: ಬಾಲಿವುಡ್‌ನ ಕ್ಯೂಟ್ ಹಾಗೂ ಅತ್ಯಂತ ಜನಪ್ರಿಯ ದಂಪತಿ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಈ ಶೀರ್ಷಿಕ ಜೋಡಿ ಶೀಘ್ರದಲ್ಲೇ ತಮ್ಮ ಎರಡನೇ ಮಗುವನ್ನು (Second Baby) ಈ ಜಗತ್ತಿಗೆ ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ!
ಬುಧವಾರ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಜಂಟಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಈ ಸಂತಸದ ಸುದ್ದಿಯನ್ನು ದಂಪತಿ ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಾರೆ.
View this post on Instagram
ದಂಪತಿ ಹಂಚಿಕೊಂಡಿರುವ ವಿಶೇಷ ಫೋಟೋದಲ್ಲಿ ಸಿದ್ಧಾರ್ಥ್, ಕಿಯಾರಾ ಹಾಗೂ ಅವರ ಮುದ್ದಾದ ಹೆಣ್ಣು ಮಗಳ ಕೈಗಳು ಒಂದಕ್ಕೊಂದು ಹೆಣೆದುಕೊಂಡಿದ್ದು, ಮಗಳು ಪುಟ್ಟ ಕಾಲುಚೀಲಗಳನ್ನು (Tiny Socks) ಕೈಯಲ್ಲಿ ಹಿಡಿದುಕೊಂಡಿರುವ ಸುಂದರ ದೃಶ್ಯವಿದೆ.
“ದೇವರಿಂದ ಮತ್ತೊಮ್ಮೆ ನಮಗೆ ಅತ್ಯಂತ ದೊಡ್ಡ ಕೊಡುಗೆ ಸಿಕ್ಕಿದೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ,” ಎಂದು ದಂಪತಿ ತಮ್ಮ ಪೋಸ್ಟ್‌ಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ.
ವಿಶೇಷವೆಂದರೆ, ಮೊದಲ ಮಗುವಿನ ಆಗಮನದ ಘೋಷಣೆಯಿಂದ ಹಿಡಿದು, ಮಗಳಿಗೆ ಹೆಸರಿಡುವವರೆಗೂ ಈ ‘ಪುಟ್ಟ ಕಾಲುಚೀಲಗಳ ಫೋಟೋ’ (Tiny Socks) ಶೇರ್ ಮಾಡುವುದು ಈ ಜೋಡಿಯ ಸಂಪ್ರದಾಯವಾಗಿದೆ. ಈ ಬಾರಿಯೂ ಅದೇ ಹಳೆಯ ಶೈಲಿಯಲ್ಲಿ ಶುಭ ಸುದ್ದಿ ಹಂಚಿಕೊಂಡಿದ್ದಾರೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್, ನಟಿ ಅಥಿಯಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಕಮೆಂಟ್ ಬಾಕ್ಸ್‌ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಕಳೆದ ವರ್ಷ ಜುಲೈ 15 ರಂದು ಸಿದ್ಧಾರ್ಥ್ ಮತ್ತು ಕಿಯಾರಾ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ನಿಗದಿತ ದಿನಾಂಕಕ್ಕಿಂತ ಮುಂಚಿತವಾಗಿಯೇ ಮುಂಬೈನ ಎಚ್.ಎನ್. ರಿಲಯನ್ಸ್ ಆಸ್ಪತ್ರೆಯಲ್ಲಿ ಕಿಯಾರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ದಂಪತಿ ತಮ್ಮ ಮುದ್ದಿನ ಮಗಳಿಗೆ ‘ಸರಾಯಾ ಮಲ್ಹೋತ್ರಾ’ (Saraayah Malhotra) ಎಂದು ನಾಮಕರಣ ಮಾಡಿದ್ದಾರೆ. ಮೆಟ್ ಗಾಲಾ (Met Gala) ಫ್ಯಾಷನ್ ಶೋನಲ್ಲಿ ಕಿಯಾರಾ ಗೌರವ್ ಗುಪ್ತಾ ವಿನ್ಯಾಸಗೊಳಿಸಿದ ಉಡುಪಿನಲ್ಲಿ ತಮ್ಮ ಬೇಬಿ ಬಂಪ್ ಪ್ರದರ್ಶಿಸಿದ್ದು ಭಾರಿ ಸದ್ದು ಮಾಡಿತ್ತು.
2023ರ ಫೆಬ್ರವರಿ 7 ರಂದು ರಾಜಸ್ಥಾನದ ಪ್ರಸಿದ್ಧ ‘ಸೂರ್ಯಗಢ ಪ್ಯಾಲೇಸ್’ನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ನ ಬ್ಲಾಕ್‌ಬಸ್ಟರ್ ‘ಷೇರ್ಷಾ’ (Shershaah) ಶೂಟಿಂಗ್ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ‘ಕಾಫಿ ವಿತ್ ಕರಣ್’ ಶೋನಲ್ಲಿ ಕಿಯಾರಾ ಬಹಿರಂಗಪಡಿಸಿದಂತೆ, ಇಟಲಿಯ ರೋಮ್ ನಗರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ‘ಷೇರ್ಷಾ’ ಚಿತ್ರದ ಡೈಲಾಗ್ ಹೇಳಿ ಕಿಯಾರಾಗೆ ರೋಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದರು.
ಸಿದ್ಧಾರ್ಥ್ ಮಲ್ಹೋತ್ರಾ ಕೊನೆಯದಾಗಿ ಜಾನಪದ ಆಧಾರಿತ ‘ದಿ ವಾನ್’ (The Vvaan) ಚಿತ್ರದಲ್ಲಿ ಕಾಣಿಸಿಕೊಂಡಿದ್ದರೆ, ಕಿಯಾರಾ ಅಡ್ವಾಣಿ ಇತ್ತೀಚೆಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

