ಸಂಸದ ಪಪ್ಪು ಯಾದವ್ ಪೈಶಾಚಿಕ ಹೇಳಿಕೆ: “ನಾಯಕರ ರೂಮ್‌ಗೆ ಹೋಗದೆ ಮಹಿಳೆಯರು ರಾಜಕೀಯ ಮಾಡಲಾಗಲ್ಲ!”

ಪಾಟ್ನಾ: ಬಿಹಾರದ ಪೂರ್ಣಿಯಾ ಕ್ಷೇತ್ರದ ಪಕ್ಷೇತರ ಸಂಸದ ಪಪ್ಪು ಯಾದವ್ ಮಹಿಳೆಯರ ಬಗ್ಗೆ ನೀಡಿದ ಅತ್ಯಂತ ಕೆಳಮಟ್ಟದ ಹೇಳಿಕೆಯೊಂದು ಈಗ ರಾಷ್ಟ್ರಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ರಾಜಕೀಯಕ್ಕೆ ಬರಬಯಸುವ ಮಹಿಳೆಯರ ಬಗ್ಗೆ ಅವರು ಆಡಿರುವ ಮಾತುಗಳು ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿವೆ.

ಖಾಸಗಿ ಸುದ್ದಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪಪ್ಪು ಯಾದವ್, ಮಹಿಳೆಯರು ರಾಜಕೀಯ ಪ್ರವೇಶಿಸುವ ಬಗ್ಗೆ ಚರ್ಚಿಸುವಾಗ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.”ಇಂದಿನ ದಿನಗಳಲ್ಲಿ ಯಾವುದೇ ಮಹಿಳೆ ಪುರುಷ ನಾಯಕರ ಕೊಠಡಿಗೆ (Room) ಪ್ರವೇಶಿಸದೆ ರಾಜಕೀಯದಲ್ಲಿ ಬೆಳೆಯಲು ಸಾಧ್ಯವಿಲ್ಲ. ಇದು ಕಹಿ ಸತ್ಯ,” ಎಂಬರ್ಥದಲ್ಲಿ ಮಾತನಾಡಿದ್ದಾರೆ. ಅವರ ಈ ಮಾತುಗಳು ಮಹಿಳಾ ರಾಜಕಾರಣಿಗಳ ಘನತೆಗೆ ಧಕ್ಕೆ ತರುವಂತಿವೆ ಎಂದು ವಿಶ್ಲೇಷಿಸಲಾಗುತ್ತಿದೆ.

ಮಹಿಳಾ ಮೀಸಲಾತಿ ಮತ್ತು ರಾಜಕೀಯದಲ್ಲಿ ಮಹಿಳೆಯರ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಇಂತಹ ಗಂಭೀರ ಆರೋಪ ಮಾಡಿದ್ದಾರೆ. ರಾಜಕೀಯ ಕ್ಷೇತ್ರವು ಮಹಿಳೆಯರಿಗೆ ಸುರಕ್ಷಿತವಲ್ಲ ಅಥವಾ ಅಲ್ಲಿನ ಬೆಳವಣಿಗೆಗೆ ಅರ್ಹತೆಗಿಂತ ಹೆಚ್ಚಾಗಿ ಇತರ ಸಂಧಾನಗಳು ನಡೆಯುತ್ತವೆ ಎಂಬ ಧಾಟಿಯಲ್ಲಿ ಅವರು ನೀಡಿರುವ ಹೇಳಿಕೆ ಈಗ ಕಿಚ್ಚು ಹಚ್ಚಿದೆ.ಪಪ್ಪು ಯಾದವ್ ಅವರ ಈ ಹೇಳಿಕೆಗೆ ವಿವಿಧ ರಾಜಕೀಯ ಪಕ್ಷಗಳ ಮಹಿಳಾ ನಾಯಕಿಯರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಮೀಸಲಾತಿ ವಿಫಲ: “ವಿರೋಧ ಪಕ್ಷಗಳು ಸಂವಿಧಾನದ ಅಪರಾಧಿಗಳು” ಎಂದು ಗುಡುಗಿದ ಪ್ರಧಾನಿ ಮೋದಿ!

ಮಹಿಳೆಯರನ್ನು ಇಷ್ಟು ಕೀಳಾಗಿ ಚಿತ್ರಿಸಿರುವ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ. “ಇದು ಮಹಿಳಾ ಶಕ್ತಿಗೆ ಮಾಡಿದ ಅವಮಾನ. ಇಂತಹ ಮನಸ್ಥಿತಿಯವರು ಸಂಸತ್ತಿನಲ್ಲಿರುವುದು ದುರಂತ” ಎಂದು ಬಿಜೆಪಿ ನಾಯಕಿಯರು ಟೀಕಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು