ಶೋರೂಮ್‌ನಿಂದ ಹೊರಬರುತ್ತಿದ್ದಂತೆ ಅಪಘಾತ: ರಸ್ತೆಗೆ ನುಗ್ಗಿದ ಕಾರು ಬೈಕ್​​ಗೆ ಡಿಕ್ಕಿ

ಶಿವಮೊಗ್ಗ: ದಸರಾ ಹಬ್ಬದ ಸಂಭ್ರಮದಲ್ಲಿ ಹೊಸ ಮಾರುತಿ ಕಾರನ್ನು ಡೆಲಿವರಿ ಪಡೆದು ಶೋರೂಮ್‌ನಿಂದ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಸುತ್ತಿದ್ದ ಬೈಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ನಗರದಲ್ಲಿ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಮಹಮದ್ ಇರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾಗರ ನಗರದ ಮಾರುತಿ ಶೋರೂಮ್‌ನಲ್ಲಿ ದಸರಾ ಹಬ್ಬದ ನಿಮಿತ್ತ ಹೊಸ ಕಾರನ್ನು ಖರೀದಿಸಿ ಗ್ರಾಹಕರು ಡೆಲಿವರಿ ಪಡೆಯುತ್ತಿದ್ದರು. ಶೋರೂಮ್‌ನಿಂದ ಹೊರಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಅತಿವೇಗವಾಗಿ ಏಕಾಏಕಿ ರಸ್ತೆಗೆ ನುಗ್ಗಿದೆ.

ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಕಾರು ಅತಿವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಹಾಗೂ ಹಿಂಬದಿ ಸವಾರ ರಸ್ತೆಗೆೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ಸಂಪೂರ್ಣ ಆತಂಕಕಾರಿ ದೃಶ್ಯವು ಶೋರೂಮ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಭಾರಿ ಅಡ್ಡಾದಿಡ್ಡಿ ಕೆಮಿಕಲ್ ಅಡಿಕೆ ಜಾಲ ಭೇದಿಸಿದ ಅಧಿಕಾರಿಗಳು: ‘ಕ್ಯಾನ್ಸರ್’ ತರಿಸುವ ಅಪಾಯಕಾರಿ ಬಣ್ಣ ಹಚ್ಚಿ ಮೋಸ

ಇಲ್ಲಿದೆ ನೋಡಿ ವಿಡಿಯೋ: 

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಮಹಮದ್ ಇರ್ಫಾನ್ ಅವರಿಗೆ ಸಾಗರ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗ ಜಿಲ್ಲಾ ಆಸ್ಪತ್ರೆಗೆ ರವಾಯಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ