Breaking News

ಇತಿಹಾಸ ಬರೆದ ಸ್ಮೃತಿ ಮಂಧನಾ: ಹಾಂಕಾಂಗ್ ವಿರುದ್ಧ ಭರ್ಜರಿ ಶತಕ – ಮಿಥಾಲಿ ರಾಜ್ ಸಾರ್ವಕಾಲಿಕ ದಾಖಲೆ ಪತನ

ದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ (Smriti Mandhana) ಅವರು ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳಾ ಟಿ೨೦ ಏಷ್ಯಾ ಕಪ್ ೨೦೨೬ರ (Women’s Asia Cup 2026) ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಶತಕ ಬಾರಿಸಿ ಹಲವು ವಿಶ್ವದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಮಾತ್ರವಲ್ಲದೆ, ಭಾರತೀಯ ಮಹಿಳಾ ಕ್ರಿಕೆಟ್‌ನ ದಂತಕಥೆ ಮಿಥಾಲಿ ರಾಜ್ ಅವರ ಸಾರ್ವಕಾಲಿಕ ಗರಿಷ್ಠ ರನ್ ದಾಖಲೆಯನ್ನು ಮುರಿದು, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಹಾಂಕಾಂಗ್ ಬೌಲರ್‌ಗಳನ್ನು ಕಟುವಾಗಿ ದಂಡಿಸಿದ ಸ್ಮೃತಿ ಮಂಧನಾ, ಕೇವಲ 57 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದರು. ಒಟ್ಟಾರೆಯಾಗಿ 64 ಎಸೆತಗಳನ್ನು ಎದುರಿಸಿದ ಅವರು 124 ರನ್ ಚಚ್ಚಿದರು. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಸಾಧನೆಗೆ ಪಾತ್ರರಾಗಿದ್ದಾರೆ. ಈ 124 ರನ್‌ಗಳ ಮೂಲಕ ಮಹಿಳಾ ಟಿ20 ಏಷ್ಯಾ ಕಪ್ ಇತಿಹಾಸದಲ್ಲೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಕಲೆಹಾಕಿದ ಆಟಗಾರ್ತಿ ಎನಿಸಿಕೊಂಡರು (ಶ್ರೀಲಂಕಾದ ಚಾಮರಿ ಅತಪತ್ತು ಅವರ ೧೧೯* ರನ್‌ಗಳ ದಾಖಲೆ ಉಡೀಸ್).

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್: ಮಿಥಾಲಿ ರಾಜ್ ದಾಖಲೆ ಉಡೀಸ್!

ಈ ಪಂದ್ಯದ ವೇಳೆ ಸ್ಮೃತಿ ಮಂಧನಾ, ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ಹೆಸರಿನಲ್ಲಿದ್ದ ಅಂತಾರಾಷ್ಟ್ರೀಯ ರನ್‌ಗಳ ದಾಖಲೆಯನ್ನು ದಾಟಿದರು.

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಸರದಾರರು:

ಸ್ಮೃತಿ ಮಂಧನಾ (ಭಾರತ): 10,880 ರನ್

ಮಿಥಾಲಿ ರಾಜ್ (ಭಾರತ): 10,868 ರನ್

ಸೂಜಿ ಬೇಟ್ಸ್ (ನ್ಯೂಜಿಲೆಂಡ್): 10,740 ರನ್

ಚಾರ್ಲೊಟ್ ಎಡ್ವರ್ಡ್ಸ್ (ಇಂಗ್ಲೆಂಡ್): 10,273 ರನ್

ಸ್ಟಾಫಾನಿ ಟೇಲರ್ (ವೆಸ್ಟ್ ಇಂಡೀಸ್): 10,007 ರನ್

ಇದನ್ನೂ ಓದಿ: ಮೈಮೇಲೆ ಮೂಡಿದ ಜರ್ಸಿ ನಂಬರ್: ಕೇವಲ ಶ್ರಮಕ್ಕೆ ಸಿಕ್ಕ ‘ಪರ್ಮನೆಂಟ್ ಜೆರ್ಸಿ ಇಂಪ್ರಿಂಟ್’ ಎಂದ ದೇವದತ್ ಪಡಿಕ್ಕಲ್

18ನೇ ಅಂತಾರಾಷ್ಟ್ರೀಯ ಶತಕ – ಲ್ಯಾನ್ನಿಂಗ್, ವೋಲ್ವಾರ್ಡ್ ಹಿಂದಿಕ್ಕಿದ ಮಂಧನಾ:

ಈ ಪಂದ್ಯದಲ್ಲಿ ಸಿಡಿಸಿದ ಶತಕದೊಂದಿಗೆ ಸ್ಮೃತಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ೧೮ನೇ ಶತಕ ಪೂರೈಸಿದರು. ಈ ಮೂಲಕ ಆಸ್ಟ್ರೇಲಿಯಾದ ಮೆಗ್ ಲ್ಯಾನ್ನಿಂಗ್ (೧೭) ಹಾಗೂ ದಕ್ಷಿಣ ಆಫ್ರಿಕಾದ ಲಾರಾ ವೋಲ್ವಾರ್ಡ್ (೧೭) ಅವರನ್ನು ಹಿಂದಿಕ್ಕಿ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳು:

ಸ್ಮೃತಿ ಮಂಧನಾ: 18 ಶತಕಗಳು

ಮೆಗ್ ಲ್ಯಾನ್ನಿಂಗ್: 17 ಶತಕಗಳು

ಲಾರಾ ವೋಲ್ವಾರ್ಡ್: 17 ಶತಕಗಳು

ಹೇಲಿ ಮ್ಯಾಥ್ಯೂಸ್: 15 ಶತಕಗಳು

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *