ಸೋಮವಾರ, ಆಗಸ್ಟ್ 3, 2026: ಶ್ರಾವಣ ಸೋಮವಾರದ ಈ ಪವಿತ್ರ ದಿನದಂದು ಶಿವನ ಅನುಗ್ರಹ ಹಾಗೂ ಗ್ರಹಗಳ ಚಲನೆಯಿಂದ ಮೇಷದಿಂದ ಮೀನ ರಾಶಿಯವರೆಗಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಮೇಷ ರಾಶಿ: ಸಾಧಾರಣ ದಿನ. ಕೆಲಸದ ಸ್ಥಳದಲ್ಲಿ ಜವಾಬ್ದಾರಿ ಹೆಚ್ಚಾಗಲಿದೆ. ಹೊಸ ಉದ್ಯಮಗಳನ್ನು ತಕ್ಷಣಕ್ಕೆ ಪ್ರಾರಂಭಿಸಬೇಡಿ. ವಾಹನ ಚಾಲನೆಯಲ್ಲಿ ಮತ್ತು ಕೋಪದ ಮೇಲೆ ನಿಯಂತ್ರಣವಿರಲಿ.
ವೃಷಭ ರಾಶಿ:ದಂಪತಿಗಳ ನಡುವೆ ಸಾಮರಸ್ಯ ಮರಳಲಿದೆ. ಧನಲಾಭದ ಲಕ್ಷಣಗಳಿವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ, ಮಾತು ಸೌಮ್ಯವಾಗಿರಲಿ.
ಮಿಥುನ ರಾಶಿ : ಬುಧ ಮತ್ತು ಮಂಗಳ ಸಂಚಾರದಿಂದ ಸವಾಲುಗಳನ್ನು ಗೆಲ್ಲುವ ದಿನ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಕಚೇರಿಯಲ್ಲಿ ಜವಾಬ್ದಾರಿಗಳನ್ನು ಆತುರದಿಂದ ನಿರ್ವಹಿಸಬೇಡಿ.
ಕಟಕ ರಾಶಿ: ವ್ಯಾಪಾರಸ್ಥರಿಗೆ ಅತ್ಯುತ್ತಮ ದಿನ. ಹಿರಿಯರ ಬೆಂಬಲದಿಂದ ನೆರವೇರಬೇಕಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ದೈಹಿಕ ಆಯಾಸವಾಗದಂತೆ ಆರೋಗ್ಯ ಜಾಗ್ರತೆ ವಹಿಸಿ.
ಸಿಂಹ ರಾಶಿ: ಅನಿರೀಕ್ಷಿತ ಧನಲಾಭ ಹಾಗೂ ವೃತ್ತಿಯಲ್ಲಿ ಪ್ರಗತಿ ಕಂಡುಬರಲಿದೆ. ಧನ-ಆಸ್ತಿ ವಿಷಯಗಳಲ್ಲಿ ಅನಗತ್ಯ ವಾದ-ವಿವಾದಗಳಿಂದ ದೂರವಿರಿ.
ಕನ್ಯಾ ರಾಶಿ: ಹೊಸ ಪ್ರಯತ್ನಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಹಳೆಯ ಸಾಲದ ತೊಂದರೆಗಳು ಬಗೆಹರಿಯಲಿವೆ.ಆರೋಗ್ಯವನ್ನು ನಿರ್ಲಕ್ಷಿಸಬೇಡಿ, ರಹಸ್ಯಗಳನ್ನು ರಕ್ಷಿಸಿ.
ತುಲಾ ರಾಶಿ: ಕಾರ್ಯಕ್ಷೇತ್ರದಲ್ಲಿ ಉತ್ಸಾಹ ಹೆಚ್ಚಲಿದೆ. ಬೆಳಗಿನ ಜಾವದಲ್ಲಿ ಶುಭ ಸುದ್ದಿ ಬರಲಿದೆ. ತಂದೆ-ತಾಯಿಯವರ ಮಾತನ್ನು ಗೌರವಿಸಿ.
ವೃಶ್ಚಿಕ ರಾಶಿ: ಆರ್ಥಿಕ ಪರಿಸ್ಥಿತಿಯಲ್ಲಿ ಸಣ್ಣಮಟ್ಟದ ಸುಧಾರಣೆ ಕಂಡುಬರಲಿದೆ. ಅನಗತ್ಯವಾಗಿ ಯಾರಿಗೂ ಸಾಲ ನೀಡಬೇಡಿ. ಪ್ರವಾಸದಲ್ಲಿ ಜಾಗರೂಕರಾಗಿರಿ.
ಧನು ರಾಶಿ: ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಸಿಗಲಿದ್ದು, ಆದಾಯ ಹೆಚ್ಚಲಿದೆ. ಕಾನೂನು ಅಥವಾ ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಆತುರಪಡಬೇಡಿ.
ಮಕರ ರಾಶಿ: ಉದ್ಯೋಗಿಗಳಿಗೆ ನೂತನ ಹುದ್ದೆ ಅಥವಾ ಬಡ್ತಿ ಸಿಗುವ ಸುದ್ದಿ ಸಿಗಲಿದೆ. ದಿನಚರಿಯಲ್ಲಿ ಆಲಸ್ಯದ ಪ್ರಭಾವಕ್ಕೆ ಒಳಗಾಗಬೇಡಿ.
ಕುಂಭ ರಾಶಿ: ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಸಿಗಲಿವೆ. ಆಹಾರದ ವ್ಯತ್ಯಾಸದಿಂದ ಆರೋಗ್ಯ ಹಾಳಾಗದಂತೆ ಎಚ್ಚರ ವಹಿಸಿ.
ಮೀನ ರಾಶಿ: ಮಾನಸಿಕ ಶಾಂತಿ ಸಿಗಲಿದ್ದು, ಕೆಲಸಗಳಿಗೆ ತಕ್ಕ ಗೌರವ ಸಿಗಲಿದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ.

