ಹರಾರೆ: ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ತನ್ನ ಪ್ರಾಬಲ್ಯ ಮುಂದುವರೆಸಿದೆ. ಅಫ್ಘಾನ್ ವಿರುದ್ಧದ ಸೆಮಿಫೈನಲ್ಸ್‌ನಲ್ಲಿ ದಾಖಲೆಯ ಮೊತ್ತವನ್ನು ಚೇಸ್ ಮಾಡಿ ಫೈನಲ್‌ಗೆ ಪ್ರವೇಶ ಪಡೆಯಿತು.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ಫೈಜಲ್ ಶಿನೋಝಾಡ 93 ಎಸೆತಗಳಲ್ಲಿ 110 ರನ್, ಉಝಾಯಿರುಲ್ಲ ನೈಝಾಯಿ 86 ಎಸೆತಗಳಲ್ಲಿ 101, ಒಸ್ಮನ್ ಸಾದತ್ 39 ರನ್, ಖಾಲಿದ್ ಅಹ್ಮದ್ಝೈ 31, ಅಝೀಝುಲ್ಲಾ ಮೈಕಿಲ್ 12, ಅಬ್ದುಲ್ ಅಜೀಜ್ 7 ರನ್‌ಗಳ ಸಹಾಯದಿಂದ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 310 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಭಾರತದ ಪರ ದಿಪೇಶ್ ದೇವೇಂದ್ರನ್ ಮತ್ತು ಕನಿಷ್ಕ್ ಚೌಹಾನ್ ತಲಾ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ: ತಮಿಳುನಾಡಿಗೆ ಏಕೆ ಹೋಗಬೇಕು? ಪುತ್ತೂರಿನ ಈ ನೂತನ ಮಳಿಗೆಯಲ್ಲೂ ಕಾಂಚೀಪುರಂ ಸಾರಿ ಲಭ್ಯ
ಗುರಿ ಬೆನ್ನತ್ತಿದ ಭಾರತ ಸ್ಪೋಟಕ ಆರಂಭವನ್ನು ಪಡೆಯಿತು. ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಕೇವಲ 33 ಎಸೆತಗಳಲ್ಲಿ 4 ಸಿಕ್ಸರ್, 9 ಬೌಂಡರಿಯೊಂದಿಗೆ 68 ರನ್ ಗಳಿಸಿ ಭದ್ರ ಅಡಿಪಾಯ ಹಾಕಿ ಕೊಟ್ಟರು.
ನಂತರ ಜೊತೆಯಾದ ಆರೋನ್ ಜಾರ್ಜ್ ಮತ್ತು ನಾಯಕ ಆಯುಶ್ ಮ್ಹಾತ್ರೆ 114ರನ್‌ಗಳ ಜೊತೆಯಾಟದೊಂದಿಗೆ ಗೆಲುವಿನ ಸನಿಹಕ್ಕೆ ತೆಗೆದುಕೊಂಡು ಹೋದರು. ಆಯುಶ್ ವಿಕೆಟ್ ಪತನದ ನಂತರ ಆರೋನ್ ಮತ್ತು ವಿಹಾನ್ ಮಲ್ಹೋತ್ರ 96 ರನ್‌ಗಳ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿ ಭಾರತದ ಗೆಲುವಿನ ಹಾದಿ ಸುಗಮಗೊಳಿಸಿದರು.
ಭಾರತ 41.1 ಓವರ್‌ಗಳಲ್ಲಿ ಗುರಿ ಬೆನ್ನತ್ತಿ U-19 ಇತಿಹಾಸದಲ್ಲೇ ದೊಡ್ಡ ಮೊತ್ತವನ್ನು ಚೇಸ್ ಮಾಡಿದ ಖ್ಯಾತಿ ಗಳಿಸಿತು. ಹಾಗೆಯೇ ಪೈನಲ್ಸ್‌ಗೆ ಪ್ರವೇಶ ಪಡೆಯಿತು.
ಭಾರತ ಪರ ಆರಾನ್ ಜಾರ್ಜ್ 104 ಎಸೆತಗಳಲ್ಲಿ 115 ರನ್, ವೈಭವ್ ಸೂರ್ಯವಂಶಿ 33 ಎಸೆತಗಳಲ್ಲಿ 68, ಆಯುಷ್ ಮ್ಹಾತ್ರೆ 59 ಎಸೆತಗಳಲ್ಲಿ 62, ವಿಹಾನ್ ಮಹ್ಲೋತ್ರ 38 ರನ್ ಗಳಿಸಿದರು. ಅಪ್ಘಾನ್ ಪರ ನೂರಿಸ್ತಾನಿ ಒಮರ್ಝೈ 2, ವಹೀದುಲ್ಲಾ ಜರ್ದಾನ್ 1 ವಿಕೆಟ್ ಪಡೆದರು. ಫೆ.6 ಶುಕ್ರವಾರ ಹರಾರೆಯಲ್ಲಿ ಭಾರತ ಫೈನಲ್ಸ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

