ಉತ್ತರಾಖಂಡ : ಹರಿದ್ವಾರದಲ್ಲಿ 2027ರಲ್ಲಿ ನಡೆಯಲಿರುವ ಅರ್ಧ ಕುಂಭಮೇಳಕ್ಕೆ ಸಂಬಂಧಿಸಿದಂತೆ ಮೇಳಾ ಆಡಳಿತ ಮಂಡಳಿ ಮಹತ್ವದ ಮಾಹಿತಿಯನ್ನು ಪ್ರಕಟಿಸಿದೆ. ಈ ಬಾರಿ ಮೇಳದಲ್ಲಿ ಒಟ್ಟು 10 ಪ್ರಮುಖ ಪವಿತ್ರ ಸ್ನಾನೋತ್ಸವಗಳು ನಡೆಯಲಿದ್ದು, ಅವುಗಳಲ್ಲಿ 3 ಅಮೃತ ಸ್ನಾನಗಳು ವಿಶೇಷವಾಗಿವೆ.
ಮೇಳವು 2027 ಜನವರಿ 14ರಂದು ಮಕರ ಸಂಕ್ರಾಂತಿಯಂದು ಆರಂಭವಾಗಿ ಏಪ್ರಿಲ್ ತಿಂಗಳವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಲಕ್ಷಾಂತರ ಭಕ್ತರು ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಹರಿದ್ವಾರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಮೊದಲ ಪವಿತ್ರ ಸ್ನಾನ ಜನವರಿ 14ರಂದು,(ಮಕರ ಸಂಕ್ರಾಂತಿ )ಎರಡನೇ ಸ್ನಾನ ಫೆಬ್ರುವರಿ 6ರಂದು (ಮೌನಿ ಅಮಾವಾಸ್ಯೆ) ಮೂರನೇ ಸ್ನಾನ ಫೆಬ್ರುವರಿ 11ರಂದು (ವಸಂತ ಪಂಚಮಿ)ನಾಲ್ಕನೆಯ ಸ್ನಾನ 20ರಂದು (ಮಾಘ ಪೂರ್ಣಿಮ)ಮತ್ತು ಐದನೇಯದು ಮಾರ್ಚ್ 6 ರಂದು (ಮಹಾಶಿವರಾತ್ರಿ) ನಡೆಯಲಿದೆ.

ಇದನ್ನೂ ಓದಿ ಅಂಬೇಡ್ಕರ್ ಅವರನ್ನು ವ್ಯಕ್ತಿ ಎನ್ನುವುದಕ್ಕಿಂತ ಶಕ್ತಿ ಎಂದರೆ ತಪ್ಪಾಗಲಾರದು : ವಿಜಯಲಕ್ಷ್ಮಿ
ಅರ್ಧ ಕುಂಬದ ಆರನೆಯ ಪವಿತ್ರ ಸ್ನಾನ ಮಾರ್ಚ್ 8ರಂದು (ಪಾಲ್ಗುಣ ಅಮಾವಾಸ್ಯೆ ) ಏಳನೇಯದು ಏಪ್ರಿಲ್ 7 ರಂದು (ನವ ಸಂವತ್ಸರ) ಎಂಟನೆಯದು ಎಪ್ರಿಲ್ 14ರಂದು ಒಂಬತ್ತನೆಯದು ಏಪ್ರಿಲ್ 15ರಂದು ಮತ್ತು ಅಂತಿಮ ಪವಿತ್ರ ಸ್ನಾನ ಏಪ್ರಿಲ್ 20ರಂದು (ಚೈತ್ರ ಪೂರ್ಣಿಮೇ) ಮೇಳ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧಿಕಾರಿ ಸೋನಿಕಾ ಸಿಂಗ್ ಹೇಳಿದ್ದಾರೆ.

ನಾಗ ಸಾಧುಗಳು ಮತ್ತು ವಿವಿಧ ಅಖಾಡಗಳ ಸಾಧುಗಳು ಭವ್ಯ ಮೆರವಣಿಗೆಯೊಂದಿಗೆ ಗಂಗೆಯಲ್ಲಿ ಸ್ನಾನ ಮಾಡುವ ಪರಂಪರೆ ಇರುತ್ತದೆ. ಭಕ್ತರ ಸುರಕ್ಷತೆ ಮತ್ತು ಸೌಲಭ್ಯಗಳಿಗಾಗಿ ಸರ್ಕಾರ ವ್ಯಾಪಕ ಸಿದ್ಧತೆಗಳನ್ನು ಕೈಗೊಂಡಿದೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

