ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ದೇವಿನಗರ-ಮೋಂತಿಮಾರಿನ ಅಂಬಿಕಾಮಿತ್ರ ಮಂಡಳಿ ವತಿಯಿಂದ ಭಾನುವಾರದಂದು ಆಯ್ದ 50 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೇವಕಿ ಎಚ್. ಹಾಗೂ ವಿನುತ ಲಕ್ಷ್ಮಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಹಳ್ಳಿ ಪ್ರದೇಶದ ಮಕ್ಕಳಿಗೆ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿವೆ ಎಂದು ಅಭಿಪ್ರಾಯಪಟ್ಟರು.
ದಾನಗಳಲ್ಲಿ ಶ್ರೇಷ್ಠವಾದುದು ವಿದ್ಯಾದಾನ. ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಶ್ರೀ ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಎಲ್ಲರ ಮೇಲೂ ಸದಾ ಇರಲಿ ಎಂದು ಶುಭ ಹಾರೈಸಿದರು.
ಪುಸ್ತಕ ವಿತರಣೆ ಫೋಟೋ:

ಇದನ್ನೂ ಓದಿ: ಮಂಗಳೂರಿನಲ್ಲಿ ‘ಎಬೋಲಾ ವೈರಸ್’ ಹೈ ಅಲರ್ಟ್!: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಠಿಣ ಸ್ಕ್ರೀನಿಂಗ್ ಪ್ರೋಟೋಕಾಲ್ ಜಾರಿ
ಈ ಸಂದರ್ಭದಲ್ಲಿ ಆಯ್ದ 50 ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು. ಮಂಡಳಿಯ ಅಧ್ಯಕ್ಷ ದೀಕ್ಷಿತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ದಿನೇಶ್ ಸಾಲ್ಯಾನ್, ಮಾಜಿ ಗೌರವಾಧ್ಯಕ್ಷರಾದ ಸತೀಶ್ ಟೈಲರ್ ಹಾಗೂ ನೇಮಿರಾಜ್ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕಿ ದೇವಕಿ ಎಚ್., ವಿನುತ ಲಕ್ಷ್ಮಿ, ಉಪಾಧ್ಯಕ್ಷ ತಾರಾನಾಥ ದೇರಡ್ಕ ಹಾಗೂ ಕಾರ್ಯದರ್ಶಿ ಪುನೀತ್ ಕುಲಾಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಕ್ಕಳು, ಪೋಷಕರು ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು. ಅಧ್ಯಕ್ಷ ದೀಕ್ಷಿತ್ ಶೆಟ್ಟಿ ವಂದಿಸಿದರು. ದಿನೇಶ್ ಆಚಾರ್ಯ ಸ್ವಾಗತಿಸಿ ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


