ಉಡುಪಿ: ಕರಾವಳಿಯ ಜಾನಪದ ಕಲೆ ‘ಹುಲಿ ವೇಷ’ದ ವೈಭವಕ್ಕೆ ಸ್ವತಃ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಮನಸೋತ ಅಪರೂಪದ ಸನ್ನಿವೇಶ ಬ್ರಹ್ಮಾವರದಲ್ಲಿ ನಡೆದಿದೆ. ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಅಂಗವಾಗಿ ಆಯೋಜಿಸಲಾಗಿದ್ದ ಹುಲಿ ವೇಷದ ಕುಣಿತಕ್ಕೆ ಶಾಸಕ ಯತ್ನಾಳ್ ತಾಸೆ ಪೆಟ್ಟಿನ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿ ಸಾರ್ವಜನಿಕರ ಗಮನ ಸೆಳೆದಿದ್ದಾರೆ.
ಬ್ರಹ್ಮಾವರ ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಹಿನ್ನೆಲೆಯಲ್ಲಿ ‘ವಾರಂಬಳ್ಳಿ ಫ್ರೆಂಡ್ಸ್’ ಆಯೋಜಿಸಿದ್ದ ಹುಲಿವೇಷದ ‘ಊದು ಪೂಜೆ’ ಕಾರ್ಯಕ್ರಮದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರಮುಖ ಅತಿಥಿಯಾಗಿ ಭಾಗವಹಿಸಿದ್ದರು. ಕರಾವಳಿಯ ವಿಶಿಷ್ಟ ಸಂಸ್ಕೃತಿಯಾದ ಹುಲಿವೇಷ ಕಲಾತಂಡದ ಅಬ್ಬರದ ತಾಸೆ ಪೆಟ್ಟು ಹಾಗೂ ಹುಲಿವೇಷಧಾರಿಗಳ ಭರ್ಜರಿ ಪ್ರದರ್ಶನವನ್ನು ವೀಕ್ಷಿಸಿದ ಯತ್ನಾಳ್, ತಾವೂ ಕೂಡ ಉತ್ಸಾಹದಿಂದ ಅಖಾಡಕ್ಕಿಳಿದು ಹುಲಿ ವೇಷಧಾರಿಗಳ ಜೊತೆ ಹೆಜ್ಜೆ ಹಾಕಿದರು.
Video:
ಶಾಸಕರ ಈ ವಿಶಿಷ್ಟ ಹಾಗೂ ಧಾರ್ಮಿಕ ಉತ್ಸಾಹದ ನಡೆ ವೀಕ್ಷಕರು ಹಾಗೂ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮತ್ತು ರೋಮಾಂಚನವನ್ನು ಉಂಟುಮಾಡಿತು.

