Breaking News

ಏರ್‌ಟೆಲ್‌ನಿಂದ ಪ್ರಮುಖ ಪ್ರೀಪೇಡ್ ಪ್ಲಾನ್‌ಗಳು ರದ್ದು: ಹೆಚ್ಚಾಗಲಿದೆ ಗ್ರಾಹಕರ ರೀಚಾರ್ಜ್ ಹೊರೆ

ದೆಹಲಿ: ಟೆಲಿಕಾಂ ದೈತ್ಯ ಭಾರ್ತಿ ಏರ್‌ಟೆಲ್ (Bharti Airtel) ತನ್ನ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದ್ದು, ದೇಶಾದ್ಯಂತ ತನ್ನ ಪ್ರಮುಖ ಹಾಗೂ ಜನಪ್ರಿಯ ಪ್ರೀಪೇಡ್ ಪ್ಲಾನ್‌ಗಳನ್ನು ರದ್ದುಗೊಳಿಸಿದೆ. ಸರಾಸರಿ ಆದಾಯ (ARPU) ಹೆಚ್ಚಿಸುವ ಹಾಗೂ ದರ ರಚನೆಯನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಏರ್‌ಟೆಲ್ ಈ ಪರೋಕ್ಷ ದರ ಏರಿಕೆ ನಿರ್ಧಾರ ಕೈಗೊಂಡಿದೆ.

ರದ್ದಾದ ಪ್ರಮುಖ ಪ್ಲಾನ್‌ಗಳು ಹಾಗೂ ಬದಲಾವಣೆಗಳು:
₹299 ಪ್ಲಾನ್ ಬಂದ್: ಪ್ರತಿದಿನ 1.5GB ಡೇಟಾ ಹಾಗೂ 28 ದಿನಗಳ ವ್ಯಾಲಿಡಿಟಿ ನೀಡುತ್ತಿದ್ದ ₹299 ಅತ್ಯಂತ ಜನಪ್ರಿಯ ಪ್ಲಾನ್ ಅನ್ನು ಏರ್‌ಟೆಲ್ ಸಂಪೂರ್ಣವಾಗಿ ಹಿಂಪಡೆದಿದೆ.

ಬದಲಿ ಪ್ಲಾನ್ ₹349: ₹299 ಪ್ಲಾನ್ ಬದಲಿಗೆ ಗ್ರಾಹಕರು ಈಗ ₹349 ಪ್ಲಾನ್ ಆಯ್ಕೆ ಮಾಡಿಕೊಳ್ಳಬೇಕಾಗಿದೆ (ಇದು ದಿನಕ್ಕೆ 2GB ಡೇಟಾ ನೀಡುತ್ತದೆ). ಇದರ ಪರಿಣಾಮವಾಗಿ ಗ್ರಾಹಕರಿಗೆ ನೇರವಾಗಿ 16% ನಷ್ಟು ದರ ಏರಿಕೆಯಾಗಿದೆ.

ಇತರ ರದ್ದಾದ ಪ್ಲಾನ್‌ಗಳು: ₹319 (30 ದಿನಗಳ ವ್ಯಾಲಿಡಿಟಿ), ₹579, ₹619 ಹಾಗೂ ₹649 ಪ್ರೀಪೇಡ್ ಪ್ಲಾನ್‌ಗಳನ್ನು ಸಹ ಏರ್‌ಟೆಲ್ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಇದನ್ನೂ ಓದಿ: ಭಾರತೀಯ ಮಾರುಕಟ್ಟೆಗೆ ‘ಪ್ಯಾನಾಸೋನಿಕ್ ಲೂಮಿಕ್ಸ್ L10’ ಹೈ-ಎಂಡ್ ಕ್ಯಾಮೆರಾ ಲಾಂಚ್
ಕಡಿಮೆ ಬೆಲೆಯ ಪ್ಲಾನ್‌ಗಳು ಲಭ್ಯ: ₹199 (28 ದಿನಗಳಿಗೆ 2GB ಒಟ್ಟು ಡೇಟಾ) ಮತ್ತು ₹219 ಪ್ಲಾನ್‌ಗಳನ್ನು ಕಂಪನಿ ಕಾಯ್ದುಕೊಂಡಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *