ಪುತ್ತೂರು: ಹೈದರಾಬಾದ್‌ನ ನಾದರ್‌ಗುಲ್‌ನ ವಿದ್ಯಾಭಾರತಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ವಿದ್ಯಾಭಾರತಿಯ ಕ್ಷೇತ್ರಮಟ್ಟದ ಅಥ್ಲೆಟಿಕ್ಸ್ ಹಾಗೂ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಪುತ್ತೂರಿನ ಬಪ್ಪಳಿಗೆಯಲ್ಲಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದು ಬಹುಮಾನಗಳನ್ನು ಬಾಚಿಕೊಂಡಿದ್ದಾರೆ.
ಈ ಮೂಲಕ ಶಾಲೆಯ ಬಾಲವರ್ಗದ ಬಾಲಕರ ಹಾಗೂ ಬಾಲಕಿಯರ ಚೆಸ್ ತಂಡಗಳು ಮತ್ತು ಕಿಶೋರ ವಿಭಾಗದ ಅಥ್ಲೆಟಿಕ್ಸ್ ತಂಡವು ರಾಷ್ಟ್ರಮಟ್ಟದ ಕೂಟಕ್ಕೆ ಆಯ್ಕೆಯಾಗಿ ಸಂಸ್ಥೆಗೆ ಕೀರ್ತಿ ತಂದಿವೆ.

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಆರುಷಿ ಎನ್. ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಈಕೆ ತೆಂಕಿಲದ ಕೃಷ್ಣ ನಾಯಕ್ ಮತ್ತು ರಮ್ಯ ಕೃಷ್ಣ ದಂಪತಿಯ ಪುತ್ರಿ. ಆರಾಧ್ಯ ಗಣೇಶ್ ಬಾಲವರ್ಗದ ಬಾಲಕರ ವಿಭಾಗದ ಹೈಜಂಪ್ ಸ್ಪರ್ಧೆಯಲ್ಲಿ 7ನೇ ತರಗತಿಯ ಆರಾಧ್ಯ ಗಣೇಶ್ ಬೆಳ್ಳಿ ಪದಕ ಪಡೆದಿದ್ದಾರೆ. ಈತ ಸುನಿಲ್ ರಾಜ್ ಮತ್ತು ಬಿ. ಬಿ. ವಿದ್ಯಾ ದಂಪತಿಯ ಪುತ್ರ. 8ನೇ ತರಗತಿಯ ದೀಪಾಂಶ್ ಶೆಟ್ಟಿ 600 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಈತ ಉರ್ಲಾಂಡಿಯ ಮಹೇಶ್ ಜಿ. ಮತ್ತು ಸುಕನ್ಯಾ ಕೆ. ದಂಪತಿಯ ಪುತ್ರ.
ಇದನ್ನೂ ಓದಿ: ಬಂಗಾರಪೇಟೆಯಲ್ಲಿ ಬಿರಿಯಾನಿ, ಮೊಸರು ಬಜ್ಜಿಯಲ್ಲಿ ಸತ್ತ ಹಲ್ಲಿ ಪತ್ತೆ
ಚೆಸ್ ಚಾಂಪಿಯನ್‌ಶಿಪ್: ರಾಷ್ಟ್ರಮಟ್ಟಕ್ಕೆ ಬಾಲಕರ & ಬಾಲಕಿಯರ ತಂಡ:
1. ಬಾಲವರ್ಗದ ಬಾಲಕರ ಚೆಸ್ ತಂಡ (ಪ್ರಥಮ ಸ್ಥಾನ):
ಸಂಹಿತ್ ಜೊಸ್ಸಿ ಲೋಬೋ (7ನೇ ತರಗತಿ, ಉಪ್ಪಿನಂಗಡಿ – ಡಾ. ಸುಪ್ರೀತ್ ಜೋಯಲ್ ಲೋಬೋ ಮತ್ತು ಡಾ. ಶೈನಿ ಪಾಯಸ್ ಅವರ ಪುತ್ರ).
ರತುಲ್ ಅದ್ವೈತ್ (7ನೇ ತರಗತಿ, ಕಾಣಿಯೂರು – ಅರವಿಂದ ಕುಮಾರ್ ಕೆ. ಮತ್ತು ಜ್ಯೋತಿ ಕುಮಾರಿ ಕೆ. ಅವರ ಪುತ್ರ).
ಮಯೂರ್ ಎಸ್. ಮಯ್ಯ (7ನೇ ತರಗತಿ, ಕುಂಜೂರು ಪಂಜ – ಶ್ರೀನಿವಾಸ ಮಯ್ಯ ಡಿ. ಮತ್ತು ಜಯಲಕ್ಷ್ಮೀ ಎಸ್. ಮಯ್ಯ ಅವರ ಪುತ್ರ).
ತ್ರಿನಯ್ ರೈ (7ನೇ ತರಗತಿ, ಕಲ್ಲಾರೆ – ಪ್ರವೀಣ್ ರೈ ಸಿ. ಮತ್ತು ತೃಪ್ತಿ ರೈ ಅವರ ಪುತ್ರ).
2. ಬಾಲವರ್ಗದ ಬಾಲಕಿಯರ ಚೆಸ್ ತಂಡ (ಪ್ರಥಮ ಸ್ಥಾನ):
ಸಾನ್ವಿ ಜಿ. (8ನೇ ತರಗತಿ, ಪೆರ್ನೆ – ಗಿರೀಶ ಗೌಡ ಮತ್ತು ಸುಮಿತ್ರ ದಂಪತಿಯ ಪುತ್ರಿ).
ನೈನಿಕ ಎ. ಆರ್. (8ನೇ ತರಗತಿ, ಸಂಪ್ಯ – ರವಿಕುಮಾರ ಕೆ. ಮತ್ತು ಸುಮಿತ್ರ ಕೆ. ದಂಪತಿಯ ಪುತ್ರಿ).
ಕೆ. ಎಮ್. ಶಮಿತ ಭಟ್ (8ನೇ ತರಗತಿ, ದರ್ಬೆ – ಕೆ. ಜಿ. ಮುರಳೀಧರ ಮತ್ತು ಕೆ. ಉಷಾ ಮುರಳೀಧರ ದಂಪತಿಯ ಪುತ್ರಿ).
ಶಾಂಭವಿ ರಂಜನ್ (8ನೇ ತರಗತಿ, ಪಡೀಲ್ – ಸಂಜೀವ ರಂಜನ್ ಮತ್ತು ಅರ್ಪಣಾ ಕುಮಾರಿ ದಂಪತಿಯ ಪುತ್ರಿ).
ಸಾಧಕ ವಿದ್ಯಾರ್ಥಿಗಳನ್ನು ನಟ್ಟೋಜ ಫೌಂಡೇಶನ್ ಟ್ರಸ್ಟ್‌ನ ಆಡಳಿತ ಮಂಡಳಿ, ಪ್ರಾಂಶುಪಾಲರು, ತರಬೇತುದಾರರು ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿ ಶುಭ ಹಾರೈಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

