ಪುತ್ತೂರು: ತಾಲೂಕು ವ್ಯಾಪ್ತಿಯ ಮುಂಡೂರು ಮತ್ತು ಬಜತ್ತೂರಿನಲ್ಲಿ ಸಾಮಾಜಿಕ ಅರಣ್ಯ ವ್ಯಾಪ್ತಿಯಲ್ಲಿದ್ದ ಪ್ರದೇಶದಿಂದ ಮರಗಳ ಕಟಾವಿಗೆ ರಾಜ್ಯ ಸರಕಾರ ಆದೇಶ ನೀಡಿದ್ದು ಇದರಿಂದ ನಿಯೋಜಿತ ಸ್ಥಳವಾದ ಮುಂಡೂರಿನಲ್ಲಿ ಆರ್‌ಟಿಒ ಟ್ರ್ಯಾಕ್ ಮತ್ತು ಬಜತ್ತೂರಿನಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ವಸತಿ ಶಾಲಾ ಸಮುಚ್ಚಯ ನಿರ್ಮಾಣಯಕ್ಕೆ ಹಾದಿ ಸುಗಮವಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಸ.ನಂ.142/1 (ನಕ್ಷೆಯಂತೆ 142/152) 4 ಎಕರೆ ಸರಕಾರಿ ಭೂಮಿಯನ್ನು ಡ್ರೈವಿಂಗ್ ಟ್ರಾಕ್ ಮತ್ತು ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡುವ ಜಾಗದಲ್ಲಿರುವ 267 ಮರಗಳನ್ನು ಮತ್ತು ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ಸ.ನಂ. 253/1ಪಿ2೨ ರಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಪ್ರಜಾತಿ ಮತ್ತು ಪ.ಪಂಗಡದ ಹಾಗೂ ಇತರ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ ಡಾ.ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗೆ ಬಜತ್ತೂರು ಗ್ರಾಮದ ಬಿದಿರಾಡಿ ಎಂಬಲ್ಲಿ ಪ್ರಸ್ತಾಪಿತ 6.20 ಎಕರೆ ಜಾಗದಲ್ಲಿರುವ 821 ಮರಗಳನ್ನು ಒಟ್ಟು 1088 ಮರಗಳನ್ನು ತೆರವು ಮಾಡುವ ಸಂಬಂಧ ವ್ಯಕ್ಷ ಅಧಿಕಾರಿ ಯವರು ಕರ್ನಾಟಕ ಮರ ಸಂರಕ್ಷಣಾ ಕಾಯ್ದೆ 1976ರ ಕಲಂ 8(3) ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಲು ಸರಕಾರದ ಆದೇಶ ಪತ್ರದಲ್ಲಿ ಸೂಚಿಸಲಾಗಿದೆ.
ಇದನ್ನೂ ಓದಿ : ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ: ಬಿಜೆಪಿ ಆಪ್ತ ಸಹಾಯಕನ ಕೊಲೆ
ಮುಂಡೂರಿನಲ್ಲಿ ಆರ್‌ಟಿಒ ಟ್ರ್ಯಾಕ್ ನಿರ್ಮಾಣ ಮಾಡುವಲ್ಲಿ 4 ಎಕ್ರೆ ಸರಕಾರಿ ಭೂಮಿಯಲ್ಲಿ ಮರಗಳಿದ್ದು ಅದನ್ನು ತೆರವು ಮಾಡುವುದು ಮತ್ತು ಬಜತ್ತೂರಿನ ಬಿದಿರಾಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ವಸತಿ ಶಾಲಾ ಕಟ್ಟಡ ನಿರ್ಮಾಣದ ಜಾಗದಲ್ಲಿ ಮರಗಳಿದ್ದು ಅವುಗಳನ್ನು ಕಠಾವು ಮಾಡಲು ಅರಣ್ಯ ಸಚಿವರಿಗೆ ಮನವಿ ಮಾಡಿದ್ದು ಇದೀಗ ಮನವಿಯನ್ನು ಪುರಸ್ಕರಿಸಿ ಮರ ಕಟಾವಿಗೆ ಆದೇಶ ನೀಡಲಾಗಿದೆ. ಮರ ಕಠಾವು ಮಾಡಲು ಇಲಾಖೆಯಿಂದ ಅನುಮತಿ ದೊರೆಯುವಲ್ಲಿ ವಿಳಂಬವಾದ ಕಾರಣ ಅಭಿವೃದ್ದಿ ಕಾಮಗಾರಿ ನಡೆಸಲು ಅಡ್ಡಿಯಾಗಿತ್ತು ಈಗ ಹಾದಿ ಸುಗಮವಾಗಿದ್ದು ಈ ಎರಡು ಕಾಮಗಾರಿಗಳು ಶೀಘ್ರ ಪ್ರಾರಂಭವಾಗಲಿದೆ ಎಂದು ಅಶೋಕ್ ರೈ ಹೇಳಿದರು.

