ತಮಿಳುನಡಿನಲ್ಲಿ ದಳಪತಿ ವಿಜಯ್ ಪಕ್ಷದ ಅಶ್ವಮೇಧ: ಸಿಎಂ ಸ್ಟಾಲಿನ್, ಡಿಸಿಎಂ ಉದಯನಿಧಿಗೆ ಸೋಲು

ತಮಿಳುನಾಡು ರಾಜಕೀಯದ ಇತಿಹಾಸದಲ್ಲೇ ಅತ್ಯಂತ ಅನಿರೀಕ್ಷಿತ ಫಲಿತಾಂಶ ಹೊರಬಿದ್ದಿದೆ. ಹಾಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಪುತ್ರನಾಗಿರುವ ಡಿಸಿಎಂ ಉದಯನಿಧಿ ಸ್ಟಾಲಿನ್ ಇಬ್ಬರೂ ಪರಾಭವಗೊಂಡಿದ್ದಾರೆ. ಉತ್ತರ ಚೆನ್ನೈನ ಕೊಳತ್ತೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಎಂ.ಕೆ. ಸ್ಟಾಲಿನ್ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿ ವಿ.ಎಸ್. ಬಾಬು ಅವರ ವಿರುದ್ಧ ಸೋಲುಂಡಿದ್ದಾರೆ.

ನಟ ವಿಜಯ್ ಅವರ ಪಕ್ಷವು ಮೊದಲ ಚುನಾವಣೆಯಲ್ಲೇ ಆಡಳಿತಾರೂಢ ಡಿಎಂಕೆ ಪಕ್ಷದ ಪ್ರಬಲ ಕೋಟೆಗಳನ್ನು ಛಿದ್ರಗೊಳಿಸಿದೆ. ಮುಖ್ಯಮಂತ್ರಿಗಳ ಪುತ್ರ ಉದಯನಿಧಿ ಸ್ಟಾಲಿನ್ ಕೂಡ ಈ ಚುನಾವಣೆಯಲ್ಲಿ ಸೋಲನುಭವಿಸುವ ಮೂಲಕ ಡಿಎಂಕೆ ಕುಟುಂಬಕ್ಕೆ ಭಾರೀ ಹಿನ್ನಡೆಯಾಗಿದೆ.

Advertisement

ಇದನ್ನೂ ಓದಿ: ಶೃಂಗೇರಿ ಅಖಾಡದಲ್ಲಿ ಬಿಜೆಪಿಗೆ ಭರ್ಜರಿ ಜಯ: 52 ಮತಗಳ ಅಂತರದಿಂದ ಡಿ.ಎನ್. ಜೀವರಾಜ್ ವಿಜೇತ!

ಮತ ಎಣಿಕೆಯ ಆರಂಭದಿಂದಲೂ ಉಭಯ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇತ್ತಾದರೂ, ಅಂತಿಮವಾಗಿ ಟಿವಿಕೆ ಅಭ್ಯರ್ಥಿ ಗೆಲುವಿನ ನಗು ಬೀರಿದ್ದಾರೆ.

Advertisement

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು