ಭಾರತದ ‘ಪ್ಯಾಡ್‌ಮ್ಯಾನ್’ ಎಂದೇ ಪ್ರಖ್ಯಾತರಾದ ಉದ್ಯಮಿ ಅರುಣಾಚಲಂ ಮುರುಗಾನಂದಂ ಅವರು 2026ರ ಸಾಲಿನ ನೋಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಈ ಗೌರವವು ಭಾರತಕ್ಕೆ, ಅದರಲ್ಲೂ ವಿಶೇಷವಾಗಿ ತಮಿಳುನಾಡಿನ ಕೊಯಮತ್ತೂರಿಗೆ ಸಂದ ದೊಡ್ಡ ಹೆಮ್ಮೆಯಾಗಿದೆ.
ಗ್ರಾಮೀಣ ಮಹಿಳೆಯರ ಋತುಸ್ರಾವದ ನೈರ್ಮಲ್ಯವನ್ನು ಸುಧಾರಿಸಲು ಇವರು ಕಂಡುಹಿಡಿದ ಕಡಿಮೆ ವೆಚ್ಚದ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವು ಇಂದು ವಿಶ್ವದಾದ್ಯಂತ ಕ್ರಾಂತಿ ಮಾಡಿದೆ.ಪಾಂಡಿಚೇರಿಯ ಅರವಿಂದ್ ಕಣ್ಣಿನ ಆಸ್ಪತ್ರೆಯ ಡೀನ್ ಮತ್ತು ಅಮೆರಿಕದ ತಂಡಗಳು ಮುರುಗಾನಂದಂ ಅವರ ಹೆಸರನ್ನು ನೋಬೆಲ್ ಸಮಿತಿಗೆ ಶಿಫಾರಸು ಮಾಡಿದ್ದವು.
ಇದನ್ನೂ ಓದಿ ನಾಲ್ಕು ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: 9 ಮಂದಿ ಸಜೀವ ದಹನ!
ಈ ನಾಮನಿರ್ದೇಶನವನ್ನು ಕೇವಲ 24 ಗಂಟೆಗಳ ಒಳಗಾಗಿ ನೋಬೆಲ್ ಸಮಿತಿ ಅಂಗೀಕರಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುರುಗಾನಂದಂ ಅವರು, “ನನಗೆ ಮೊದಲು ಇದನ್ನು ನಂಬಲು ಸಾಧ್ಯವಾಗಲಿಲ್ಲ, ಇದು ನಿಜಕ್ಕೂ ಹೆಮ್ಮೆಯ ವಿಷಯ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

