ಮೂರು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ: ಮಂಗಳೂರು ಬಿಜೆಪಿ ಕಚೇರಿ ಮುಂದೆ ಸ್ವತಃ ಚರುಂಬುರಿ ತಯಾರಿಸಿ ಹಂಚಿದ ಶಾಸಕ ವೇದವ್ಯಾಸ್ ಕಾಮತ್!

ಮಂಗಳೂರು: ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದ ಹಿನ್ನೆಲೆಯಲ್ಲಿ, ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ಭರ್ಜರಿ ಸಂಭ್ರಮಾಚರಣೆ ನಡೆಯಿತು. ನಗರದ ಪಿವಿಎಸ್ ಬಳಿಯಿರುವ ಜಿಲ್ಲಾ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರು ಜಮಾಯಿಸಿ ವಿಜಯೋತ್ಸವ ಆಚರಿಸಿದರು. ಇನ್ನು ಈ ಚರುಮುರಿ ಹಂಚುವ ಮೂಲಕ ವಿರೋಧ ಪಕ್ಷಗಳಿಗೆ ಟಾಂಗ್ ನೀಡಿದ್ದಾರೆ. ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಅವರು ಬೀದಿ ಬದಿಯಲ್ಲಿ ಚುರುಮುರಿ ತಿಂದಿದ್ದರು.  ಈ ಬಗ್ಗೆ ವಿರೋಧ ಪಕ್ಷ ವ್ಯಂಗ್ಯ ಮಾಡಿತ್ತು. ಇದೀಗ ಇದಕ್ಕೆ ಟಕರ್​ ನೀಡಿ ರಾಜ್ಯ ಬಿಜೆಪಿ ಚುರುಮುರಿ ಹಂಚಿ  ಸಂಭ್ರಮಿಸಿದ್ದಾರೆ.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ವತಃ ಚರುಂಬುರಿ (ಮಂಡಕ್ಕಿ) ತಯಾರಿಸಿ ಕಾರ್ಯಕರ್ತರಿಗೆ ಮತ್ತು ಸಾರ್ವಜನಿಕರಿಗೆ ಹಂಚುವ ಮೂಲಕ ಗಮನ ಸೆಳೆದರು. ಕಾರ್ಯಕರ್ತರು ಲಡ್ಡು ಹಂಚಿ, ಪಟಾಕಿ ಸಿಡಿಸಿ ಘೋಷಣೆಗಳನ್ನು ಕೂಗಿದರು. ಮಹಿಳಾ ಕಾರ್ಯಕರ್ತರು ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

Advertisement

ಇದನ್ನೂ ಓದಿ: ಶೃಂಗೇರಿ ಅಖಾಡದಲ್ಲಿ ಬಿಜೆಪಿಗೆ ಭರ್ಜರಿ ಜಯ: 52 ಮತಗಳ ಅಂತರದಿಂದ ಡಿ.ಎನ್. ಜೀವರಾಜ್ ವಿಜೇತ!

ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ, ಜಿಲ್ಲಾಧ್ಯಕ್ಷರು ಹಾಗೂ ನೂರಾರು ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. “ಚರುಂಬುರಿ ತಿಂದ ಮೋದಿ ಗುಂಡಿಗೆ ಬಿದ್ದ ದೀದಿ” ಎಂಬಂತಹ ಘೋಷಣೆಗಳು ಸಂಭ್ರಮಾಚರಣೆಯ ವೇಳೆ ಕೇಳಿಬಂದವು.

ಹೆಚ್ಚಿನ ಸುದ್ದಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *