ಆಂಧ್ರಪ್ರದೇಶ: ಆದೋನಿ ಶಿವಾಲಯದ ಪವಿತ್ರ ದೀಪದಿಂದ ಸಿಗರೆಟ್ ಹಚ್ಚಿದ ಕಿರಾತಕ

ಆದೋನಿ: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದೋನಿ ವಿಧಾನಸಭಾ ಕ್ಷೇತ್ರದ ರಣಮಂಡಲ ಕೊಂಡ (ಬೆಟ್ಟ) ಪ್ರದೇಶದಲ್ಲಿರುವ ಪುರಾತನ ಶಿವ ದೇವಾಲಯದಲ್ಲಿ (ಸಂತಾನ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣ) ಅತ್ಯಂತ ಆಘಾತಕಾರಿ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ದೇವಸ್ಥಾನದ ಪವಿತ್ರ ದೀಪದಿಂದ ಸಿಗರೆಟ್ ಹಚ್ಚಿ ಧರ್ಮ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ದೇವಸ್ಥಾನದಲ್ಲೇ ಅಸಭ್ಯ ವರ್ತನೆ, ಅಪಚಾರ!

Advertisement

ವೈರಲ್ ವಿಡಿಯೋದಲ್ಲಿರುವ ಆರೋಪಿಯನ್ನು ಆದೋನಿ ಮಂಡಲದ ವಿರುಪಾಪುರಂ ಗ್ರಾಮದ ನಿವಾಸಿ ವಡ್ಡೆ ಈರನ್ನ ಎಂದು ಗುರುತಿಸಲಾಗಿದೆ. ಈತ ದೇವಸ್ಥಾನದ ಗರ್ಭಗುಡಿಯ ಬಳಿ ಭಕ್ತರು ಹಚ್ಚಿದ್ದ ಪವಿತ್ರ ತೈಲ ದೀಪವನ್ನು ಬಳಸಿ ಸಿಗರೆಟ್ ಹಚ್ಚಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ದೇವಸ್ಥಾನದ ಆವರಣದಲ್ಲಿ ನಿಂತು ಅತ್ಯಂತ ಅಸಭ್ಯವಾಗಿ ಹಾವಭಾವಗಳನ್ನು (Obscene Gestures) ಪ್ರದರ್ಶಿಸಿ, ಇಡೀ ಶಿವ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ವಿಡಿಯೋ ಇಲ್ಲಿದೆ ನೋಡಿ;

ಪೊಲೀಸರಿಗೆ ದೂರು: 24 ಗಂಟೆ ಕಳೆದ್ರೂ ಕ್ರಮವಿಲ್ಲವೆಂದು ಭಕ್ತರ ಕಿಡಿ!

ಈ ಘಟನೆ ಭಕ್ತರ ಕಣ್ಣಿಗೆ ಬೀಳುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ (VHP) ಹಾಗೂ ವಿವಿಧ ಹಿಂದೂ ಸಂಘಟನೆಗಳ ಮುಖಂಡರು ಮತ್ತು ಸ್ಥಳೀಯ ಭಕ್ತರಾದ ಬೋಯಾ ಶಿವರಾಜು ಎಂಬುವವರು ಆದೋನಿ ಒನ್ ಟೌನ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಕಿರಾತಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ;ಮಗನ ಹೈಟ್ ಹೆಚ್ಚಾಗಲಿ ಎಂದು ಹೆತ್ತವರೇ ಮಾಡಿದ್ರು ಅಮಾನವೀಯ ಟಾರ್ಚರ್! ಬಾಗಿಲಿನ ಫ್ರೇಮ್‌ಗೆ ಕಟ್ಟಿ ತೂಗುಹಾಕಿದ ವಿಡಿಯೋ ವೈರಲ್

ದೂರು ದಾಖಲಾಗಿ 24 ಗಂಟೆಗಳಿಗಿಂತಲೂ ಹೆಚ್ಚು ಸಮಯ ಕಳೆದಿದ್ದರೂ, ಪೊಲೀಸರು ಆರಂಭದಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ಭಕ್ತರು ಹಾಗೂ ಸಂಘಟನೆಗಳು ತೀವ್ರ ಅಸಮಾಧಾನ ಹೊರಹಾಕಿದ್ದರು. ಸದ್ಯ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆಂಧ್ರಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದ್ದು, ಪೊಲೀಸರು ಆರೋಪಿ ವಡ್ಡೆ ಈರನ್ನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಮತ್ತು ಈ ಹಳೆಯ ವಿಡಿಯೋವನ್ನು ಈಗ ವೈರಲ್ ಮಾಡಿದವರ ಹಿಂದೆ ಯಾರೆಲ್ಲ ಇದ್ದಾರೆ ಎಂಬ ಆಯಾಮದಲ್ಲೂ ತನಿಖೆ ಚುರುಕುಗೊಳಿಸಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *