ದಕ್ಷಿಣ ಕನ್ನಡ
ದಕ್ಷಿಣ ಕನ್ನಡದಲ್ಲಿ ನಾಳೆ ಭಾರೀ ಮಳೆ ಮುನ್ನೆಚ್ಚರಿಕೆ: ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ಮಂಗಳೂರು ಉಪವಿಭಾಗದಲ್ಲಿ ಹೈಸ್ಕೂಲ್ವರೆಗೆ ಹಾಗೂ ಪುತ್ತೂರು ಉಪವಿಭಾಗದಲ್ಲಿ ಪಿಯುಸಿವರೆಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.
Read Moreಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನ: ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೇಶವ ಭಂಡಾರಿ ಕೈಪ ಆಯ್ಕೆ
ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಪ್ರಸಿದ್ಧ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಭಂಡಾರಿ ಕೈಪ ಅವರು ಆಯ್ಕೆಯಾಗಿದ್ದಾರೆ.
Read Moreಬೆಂಗಳೂರು – ಮಂಗಳೂರು ರೈಲು ಪ್ರಯಾಣಿಕರ ಗಮನಕ್ಕೆ: ಯೇಡಕುಮಾರಿ-ಸಿರಿವಾಗಿಲು ಮಧ್ಯೆ ಗುಡ್ಡ ಕುಸಿತ
ಯೇಡಕುಮಾರಿ ಹಾಗೂ ಸಿರಿವಾಗಿಲು ನಿಲ್ದಾಣಗಳ ನಡುವೆ ಭಾರಿ ಗುಡ್ಡ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ಹಾಗೂ ಮುರುಡೇಶ್ವರ ನಡುವಿನ ಹಲವು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
Read Moreಮಳೆ ರಜೆ ಬಗ್ಗೆ ಸುಳ್ಳು ಸುದ್ದಿ ಹರಡಿದರೆ ಜೈಲು ಶಿಕ್ಷೆ: ಜಿಲ್ಲಾಡಳಿತದ ಕಠಿಣ ಎಚ್ಚರಿಕೆ
ಮಂಗಳೂರು ಜಿಲ್ಲೆಯಲ್ಲಿ ಮಳೆ ರಜೆ ಕುರಿತು ನಕಲಿ ಆದೇಶ ಹಾಗೂ ಸುಳ್ಳು ಸುದ್ದಿ ಹರಡಿದರೆ ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 54ರಡಿ ಒಂದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಬಹುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
Read Moreಭಾರೀ ಮಳೆ: ಆ.3ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಆ.3ರಂದು ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹವಾಮಾನ ಇಲಾಖೆ ಎಚ್ಚರಿಕೆ, ಸುರಕ್ಷತಾ ಸೂಚನೆಗಳು ಹಾಗೂ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಓದಿ.
Read Moreಮಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರ, ಬೈಕ್ ರೈಡರ್ ಅರೆಸ್ಟ್
ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕ ಲಾಡ್ಜ್ನಲ್ಲಿ ಅತ್ಯಾಚಾರ ಎಸಗಿ, ಹಣ, ಐಫೋನ್ ಪಡೆದು ಖಾಸಗಿ ಫೋಟೋ-ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಉಡುಪಿ ಮೂಲದ ಯುವತಿ ದೂರು ನೀಡಿದ್ದಾರೆ. ಆರೋಪಿ ಬಂಧನವಾಗಿದೆ.
Read Moreದಕ್ಷಿಣ ಕನ್ನಡದಲ್ಲಿ ಉಕ್ಕಿ ಹರಿವ ನೇತ್ರಾವತಿ: ಬಂಟ್ವಾಳ ತಾಲೂಕಿನಾದ್ಯಂತ ಜಲಾವೃತ, ನೆರೆ ಭೀತಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಎಎಮ್ಆರ್ ಡ್ಯಾಂನಿಂದ ನೀರು ಬಿಟ್ಟ ಹಿನ್ನೆಲೆಯಲ್ಲಿ ಬಂಟ್ವಾಳ ಹಾಗೂ ಪಾಣೆಮಂಗಳೂರಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ನೆರೆ ಭೀತಿ ಎದುರಾಗಿದೆ.
Read Moreಗ್ರಾಸ್ರೂಟ್ ಇನ್ನೋವೇಟರ್ ಗೌರವ: ದಕ್ಷಿಣ ಕನ್ನಡದ ಮೂವರು ಯುವ ಆವಿಷ್ಕಾರಕರನ್ನು ಅಭಿನಂದಿಸಿದ ಸಂಸದ ಕ್ಯಾ. ಬ್ರಿಜೇಶ್ ಚೌಟ
ನೀತಿ ಆಯೋಗದ ಗ್ರಾಸ್ರೂಟ್ ಇನ್ನೋವೇಟರ್ ರೆಕಗ್ನಿಷನ್ 2026 ಗೌರವಕ್ಕೆ ಭಾಜನರಾದ ದಕ್ಷಿಣ ಕನ್ನಡದ ಮೂವರು ಯುವ ಆವಿಷ್ಕಾರಕರನ್ನು ಸಂಸದ ಬ್ರಿಜೇಶ್ ಚೌಟ ನವದೆಹಲಿಯಲ್ಲಿ ಅಭಿನಂದಿಸಿ, ಮತ್ತಷ್ಟು ನವೋದ್ಯಮಗಳಿಗೆ ಪ್ರೋತ್ಸಾಹ ನೀಡಿದರು.
Read More“ನಾಳಿನ ನೀರಿಗಾಗಿ ಇಂದೇ ಸಸಿ ನೆಡಿ”: ಪುತ್ತೂರು ವಕೀಲರ ಸಂಘದಿಂದ ಸಸಿ ನೆಡುವ ಕಾರ್ಯಕ್ರಮ
ಪುತ್ತೂರಿನ ಆನೆಮಜಲಿನ ವಕೀಲರ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಹರಿದ್ವರ್ಣ ನೇಚರ್ ಕ್ಲಬ್ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ನ್ಯಾಯಾಧೀಶರು ಪರಿಸರ ಸಂರಕ್ಷಣೆಯ ಮಹತ್ವವನ್ನು ಒತ್ತಿಹೇಳಿದರು.
Read Moreಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ಶ್ರೀ ವ್ಯಾಸ ಪೂರ್ಣಿಮಾ ಆಚರಣೆ: ಭಾವಪೂರ್ಣ ಗುರುವಂದನೆ
ಪುತ್ತೂರಿನ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ಸಂಸ್ಥೆಯಲ್ಲಿ ವ್ಯಾಸ ಪೂರ್ಣಿಮಾ (ಗುರುಪೂರ್ಣಿಮಾ) ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು. ಪುರೋಹಿತ ನಾಗರಾಜ ಭಟ್ ಅವರಿಗೆ ಪಾದಪೂಜೆ ಸಲ್ಲಿಸಿ ಗುರುವಂದನೆ ನೀಡಲಾಯಿತು.
Read More
